ಸಾಂದರ್ಭಿಕ ಚಿತ್ರ
ಬೆಂಗಳೂರು: ಇಂಡಿಯನ್ ಅಸೋಸಿಯೇಷನ್ ಆಫ್ ಗೈನಾಕಾಲಜಿಕಲ್ (ಐಎಜಿಇ) ವತಿಯಿಂದ ಇದೇ 4 ರಿಂದ 6ರವರೆಗೆ ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ‘ಎಂಡೋಸ್ಕೋಪಿ ರಾಷ್ಟ್ರೀಯ ಸಮ್ಮೇಳನ’ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ವಿದ್ಯಾ ವಿ. ಭಟ್, ‘ದೇಶದಾದ್ಯಂತ ಸ್ತ್ರೀರೋಗ ತಜ್ಞರನ್ನು ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದರ ಜೊತೆಗೆ ರೋಗಿಗಳ ಆರೈಕೆ ಮಟ್ಟವನ್ನು ಉತ್ತೇಜಿಸುವುದು ಸಮ್ಮೇಳನ ಉದ್ದೇಶವಾಗಿದೆ. 400ಕ್ಕೂ ಹೆಚ್ಚು ಸ್ತ್ರೀ ರೋಗ ತಜ್ಞರು ಸಮ್ಮೇಳನದಲ್ಲಿ
ಪಾಳ್ಗೊಳ್ಳಲಿದ್ದಾರೆ’ ಎಂದರು.
‘ದೇಶದ 20 ಮಹಿಳಾ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸಕರು ನಡೆಸುವ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಗಳನ್ನು ಸಮ್ಮೇಳನದಲ್ಲಿ ನೇರ ಪ್ರಸಾರ ಮಾಡಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.