ADVERTISEMENT

ನಟ ಸುದೀಪ್‌ ವಿರುದ್ಧದ ವಿಚಾರಣೆಗೆ ತಡೆ

ಚಿತ್ರೀಕರಣ ಸ್ಥಳದ ಬಾಡಿಗೆ ಪಾವತಿಸದೆ ವಂಚನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 20:16 IST
Last Updated 27 ಮಾರ್ಚ್ 2019, 20:16 IST
s
s   

ಬೆಂಗಳೂರು: ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರನಟ ಸುದೀಪ್ ವಿರುದ್ಧ ಚಿಕ್ಕಮಗಳೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?: ಸುದೀಪ್‌ ಅವರು ತಮ್ಮ ‘ಕಿಚ್ಚ ಪ್ರೊಡಕ್ಷನ್‌’ ವತಿಯಿಂದ ‘ವಾರಸ್ದಾರ’ ಧಾರಾವಾಹಿ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರು ತಾಲ್ಲೂಕು ಬೈಗೂರಿನ ದೀಪಕ್‌ ಮಯೂರ್‌ ಅವರ ಕಾಫಿತೋಟ ಮತ್ತು ಪುರಾತನ ಮನೆಯನ್ನು ಬಳಸಿಕೊಂಡಿದ್ದರು. ‘ಚಿತ್ರಿಕರಣದ ವೇಳೆ ಸುದೀಪ್‌, ಸ್ಥಳ ಬಾಡಿಗೆ ಪಾವತಿಸಿಲ್ಲ ಮತ್ತು ಸ್ಥಿರಾಸ್ತಿಗೆ ನಷ್ಟ ಉಂಟು ಮಾಡಿದ್ದಾರೆ’ ಎಂಬುದು ದೀಪಕ್‌ ಮಯೂರ್‌ ಆರೋಪ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.