ADVERTISEMENT

ಪರಿಸರ ಸ್ನೇಹಿ ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹ: ರಾಜ್ಯಪಾಲ ಥಾವರ್‌

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 19:46 IST
Last Updated 21 ಆಗಸ್ಟ್ 2022, 19:46 IST
ಸಿಎಂಆರ್ ವಿಶ್ವವಿದ್ಯಾಲಯ ಮತ್ತು ರ‍್ಯಾವರಣ್ ಗತಿವಿಧಿ ಅಂಡ್ ರೈನ್‌ಮ್ಯಾಟರ್ ಫೌಂಡೇಷನ್‌ ಸಹಯೋಗದಲ್ಲಿ ‘ಶೃಂಗಸಭೆ–2022’ಯನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಉದ್ಘಾಟಿಸಿದರು
ಸಿಎಂಆರ್ ವಿಶ್ವವಿದ್ಯಾಲಯ ಮತ್ತು ರ‍್ಯಾವರಣ್ ಗತಿವಿಧಿ ಅಂಡ್ ರೈನ್‌ಮ್ಯಾಟರ್ ಫೌಂಡೇಷನ್‌ ಸಹಯೋಗದಲ್ಲಿ ‘ಶೃಂಗಸಭೆ–2022’ಯನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಉದ್ಘಾಟಿಸಿದರು   

ಬೆಂಗಳೂರು: ‘ದೇಶ ಬೃಹತ್‌ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಕೇಂದ್ರ ಸರ್ಕಾರ ಪರಿಸರ ಸ್ನೇಹಿ ಚಿಂತನೆಗಳಿಗೆ ಮೇಕ್ ಇಂಡಿಯಾ ಉಪಕ್ರಮದ ಮೂಲಕ ಪ್ರೋತ್ಸಾಹಿಸುತ್ತಿದೆ’ ಎಂದು ರಾಜ್ಯಪಾಲ ಥಾವರ್‌ ಚಂದ್ ಗೆಹಲೋತ್ ಹೇಳಿದರು.

ಸಿಎಂಆರ್ ವಿಶ್ವವಿದ್ಯಾಲಯ ಮತ್ತು ರ‍್ಯಾವರಣ್ ಗತಿವಿಧಿ ಅಂಡ್ ರೈನ್‌ಮ್ಯಾಟರ್ ಫೌಂಡೇಷನ್‌ ಸಹಯೋಗದಲ್ಲಿ ‘ಇವೈಎಸ್‌ಎಸ್‌–ಎಕೊ ಯೂತ್‌ ಸ್ಟಾರ್ಟ್‌ಅಪ್‌ ಸ್ಪರ್ಧೆ ಮತ್ತು ಶೃಂಗಸಭೆ–2022’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹವಾಮಾನ ವೈಪರೀತ್ಯದಂತಹ ತೊಂದರೆಗಳನ್ನು ಪರಿಹರಿಸಲು ನೆರವಾಗುವ ಪರಿಸರ ಸ್ನೇಹಿ ಸ್ಟಾರ್ಟ್‌ಅಪ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದುವುದು ಇಂದಿನ ಅಗತ್ಯವಾಗಿದೆ’ ಎಂದು ತಿಳಿಸಿದರು.

ADVERTISEMENT

ಯುನೆಸ್ಕೊ ಎಂಜಿಐಇಪಿನ ಜಾಗತಿಕ ದಯಾ ರಾಯಭಾರಿ ರಿಕಿ ಕೇಜ್ ಮಾತನಾಡಿ, ‘ಹವಾಮಾನ ಬದಲಾವಣೆ, ಪ್ರಭೇದಗಳ ನಶಿಸುವಿಕೆ, ಅರಣ್ಯ ನಾಶ, ಪ್ಲಾಸ್ಟಿಕ್‌, ವಾಯು ಮಾಲಿನ್ಯ ನಿಯಂತ್ರಣಕ್ಕೆ ಸ್ಟಾರ್ಟ್ಅಪ್‌ಗಳ ಮೂಲಕ ಯುವಜನತೆ ಇದರ ನೇತೃತ್ವ ವಹಿಸಿರುವುದು ಶ್ವಾಘನೀಯ’ ಎಂದರು.

ಸಿಎಂಆರ್ ಸಂಸ್ಥೆಗಳ ಸಮೂಹದ ಅಧ್ಯಕ್ಷ ಕೆ.ಸಿ ರಾಮಮೂರ್ತಿ ಮಾತನಾಡಿ, ‘ಪರಿಸರಕ್ಕೆ ಸಂಬಂಧಿಸಿದಂತೆ ಸುಸ್ಥಿರ ಭವಿಷ್ಯಕ್ಕಾಗಿ ದೇಶದಲ್ಲಿ ಪರಿಸರ ವ್ಯವಸ್ಥೆಯೊಂದನ್ನು ಸೃಷ್ಟಿಸುವುದು ಈ ಶೃಂಗಸಭೆಯ ಉದ್ದೇಶ’ ಎಂದರು.

ಐಡಿಯಾ ವರ್ಗದಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪ್ರಥಮ ಪ್ರಶಸ್ತಿ ಪಡೆದುಕೊಂಡಿತು.

ದ್ವಿತೀಯ ಸ್ಥಾನವನ್ನು ಎಐ-ಜೆನ್‌ಝೆಡ್ ಪುದುಚೇರಿ ಮತ್ತು ಕೊಂಗುನಾಡು ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ತಿರುಚಿನಾಪಲ್ಲಿಗೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.