ಬೆಂಗಳೂರು: ಮಹದೇವಪುರ ವಲಯದ ಎಚ್‌ಎಎಲ್ ಉಪ ವಿಭಾಗದ ಅನ್ನಸಂದ್ರ ಪಾಳ್ಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬಿಬಿಎಂಪಿ ಬುಧವಾರ ಆರಂಭಿಸಿತು.
ಅನ್ನಸಂದ್ರಪಾಳ್ಯ, ಒಂದನೇ ಮುಖ್ಯರಸ್ತೆ, ಒಂದನೇ ಅಡ್ಡರಸ್ತೆಯ 707ರ ಸ್ವತ್ತು ಫಿರೋಜ್ ಖಾನ್ ಅವರ ಮಾಲೀಕತ್ವದಲ್ಲಿದೆ. 30x60 ಚದರ ಅಡಿಗಳ ವಿಸ್ತೀರ್ಣದ ನಿವೇಶನದಲ್ಲಿ ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿದ್ದ ನೆಲ ಮತ್ತು ಒಂದನೇ ಮಹಡಿ ಕಟ್ಟಡವು ಶಿಥಿಲಾವಸ್ಥೆಯಲ್ಲಿರುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಕಟ್ಟಡವನ್ನು ತೆರವುಗೊಳಿಸಲು ಬಿಬಿಎಂಪಿ ನೋಟಿಸ್ ಜಾರಿ ಮಾಡಿತ್ತು.
ಸಮಯಾವಕಾಶ ನೀಡಿದ್ದರೂ ಅವರು ಕಟ್ಟಡ ತೆರವು ಮಾಡಿರಲಿಲ್ಲ. ಶಿಥಿಲಾವಸ್ಥೆ ಕಟ್ಟಡದಿಂದ ಅನಾಹುತ ಸಂಭವಿಸಬಹುದಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಚ್‌ಎಎಲ್ ಉಪ ವಿಭಾಗದ ವತಿಯಿಂದಲೇ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸೋಮನಾಥ್ ಜಾಧವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.