ADVERTISEMENT

ಬೆಂಗಳೂರು: ಸಿಐಡಿ ಪೊಲೀಸರ ಹೆಸರಿನಲ್ಲಿ ಹಣ ವಸೂಲಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 20:20 IST
Last Updated 9 ಜನವರಿ 2023, 20:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೊಡ್ಡನೆಕ್ಕುಂದಿಯಲ್ಲಿರುವ ಸ್ಪಾವೊಂದಕ್ಕೆ ನುಗ್ಗಿದ್ದ ವ್ಯಕ್ತಿಯೊಬ್ಬ ಸಿಐಡಿ ಪೊಲೀಸರ ಹೆಸರಿನಲ್ಲಿ ಬೆದರಿಸಿ, ₹ 30 ಸಾವಿರ ವಸೂಲಿ ಮಾಡಿದ್ದು, ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸ್ಪಾ ಮಾಲೀಕರು ದೂರು ನೀಡಿದ್ದಾರೆ. ಆರೋಪಿ ಪ್ರದೀಪ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜ. 2ರಂದು ಮಸಾಜ್‌ ಮಾಡಿಸುವ ಸೋಗಿನಲ್ಲಿ ಸ್ಪಾಗೆ ಬಂದಿದ್ದ ಆರೋಪಿ, ಸಿಐಡಿ ಪೊಲೀಸ್ ಎಂಬುದಾಗಿ ಗುರುತಿನ ಚೀಟಿ ತೋರಿಸಿದ್ದ. ‘ಸ್ಪಾದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದೀರಿ. ಗ್ರಾಹಕರ ವಿಡಿಯೊ ಚಿತ್ರೀಕರಿಸಿ, ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದೀರಿ. ಜೈಲಿಗೆ ಕಳುಹಿಸುತ್ತೇನೆ. ಈ ರೀತಿ ಮಾಡಬಾರದೆಂದರೆ ಹಣ ನೀಡಬೇಕು’ ಎಂದು ಆರೋಪಿ ಒತ್ತಾಯಿಸಿದ್ದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.