ADVERTISEMENT

ಸುಲಿಗೆಗೆ ಯತ್ನ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 22:09 IST
Last Updated 18 ಆಗಸ್ಟ್ 2022, 22:09 IST

ಬೆಂಗಳೂರು: ಗಂಗಾನಗರ ಮುಖ್ಯರಸ್ತೆಯ ತರಕಾರಿ ಮಾರಾಟ ಮಳಿಗೆಗೆ ಮಾರಕಾಸ್ತ್ರ ಸಮೇತ ನುಗ್ಗಿ ಸುಲಿಗೆ ಮಾಡಲು ಯತ್ನಿಸಿದ್ದ ಆರೋಪಿ ತಬ್ರೇಜ್ ಎಂಬಾತನನ್ನು ಆರ್‌.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.

‘ಕೆ.ಜಿ.ಹಳ್ಳಿ ನಿವಾಸಿ ತಬ್ರೇಜ್, ಅಪರಾಧ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ. ಜಾಮೀನು ಪಡೆದು ಮೂರು ದಿನಗಳ ಹಿಂದೆಯಷ್ಟೇ ಜೈಲಿನಿಂದ ಹೊರಗೆ ಬಂದಿದ್ದ. ಬುಧವಾರ ಬೆಳಿಗ್ಗೆ ಸುಲಿಗೆಗೆ ಯತ್ನಿಸಿದ್ದ ಆತನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ಆರ್‌.ಟಿ.ನಗರ ಠಾಣೆ ಮೂಲಗಳು ಹೇಳಿವೆ.

‘ಜೈಲಿಗೆ ಹೋಗಿ ಬಂದಿರುವು ದಾಗಿ ಹೇಳಿಕೊಂಡು ಮಚ್ಚು ಹಿಡಿದು ಸುತ್ತಾಡುತ್ತಿದ್ದ ಆರೋಪಿ, ಜನರನ್ನು ಬೆದರಿಸುತ್ತಿದ್ದ. ಅಂಗಡಿಗಳಲ್ಲಿ ನುಗ್ಗಿಹಣ ಕಿತ್ತುಕೊಳ್ಳುತ್ತಿದ್ದ. ಗಂಗಾ ನಗರದ ಮುಖ್ಯರಸ್ತೆಯಲ್ಲಿರುವ ಶಿವರಾಜು ಎಂಬುವರ ತರಕಾರಿ ಮಾರಾಟ ಮಳಿಗೆಗೂ ಬುಧವಾರ ಬೆಳಿಗ್ಗೆ ನುಗ್ಗಿದ್ದ.’

ADVERTISEMENT

‘ಶಿವರಾಜು ಮೇಲೆಹಲ್ಲೆ ನಡೆಸಿದ್ದ ಆರೋಪಿ, ಮಾರ ಕಾಸ್ತ್ರದಿಂದ ಹೊಡೆಯಲು ಮುಂದಾಗಿದ್ದ. ಸಾರ್ವಜನಿಕರು, ಆರೋಪಿಯನ್ನು ಹಿಡಿದುಕೊಂಡಿದ್ದರು' ಎಂದು ಮೂಲಗಳು ತಿಳಿಸಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.