ಬೆಂಗಳೂರು: ಕಾರು ಮಾರಾಟ ಮಾಡುವುದಾಗಿ ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿದ್ದ ವಂಚಕರೊಬ್ಬರು ನಗರದ ನಿವಾಸಿ ಮಂಜನಾಥ್ ಎಂಬುವರಿಂದ ₹ 2 ಲಕ್ಷ ಪಡೆದು ವಂಚಿಸಿದ್ದು, ಈ ಸಂಬಂಧ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸ್ಥಳೀಯ ನಿವಾಸಿಯಾದ ಮಂಜುನಾಥ್ ನೀಡಿರುವ ದೂರು ಆಧರಿಸಿ ಅಮಿತ್ ಸಿಂಗ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕಾರು ಮಾರಾಟ ಸಂಬಂಧ ಅಮಿತ್‌ಸಿಂಗ್ ಎಂಬಾತ ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿದ್ದ. ಅದನ್ನು ನಂಬಿದ್ದ ಮಂಜುನಾಥ್, ಕರೆ ಮಾಡಿ ಮಾತನಾಡಿದ್ದರು. ಕಾರಿನ ಫೋಟೊ ಕಳುಹಿಸಿದ್ದ ಆರೋಪಿ, ಖರೀದಿಗೂ ಮುನ್ನ ಭದ್ರತಾ ಠೇವಣಿ ಕಟ್ಟಬೇಕೆಂದು ಹೇಳಿದ್ದ. ಅದನ್ನು ನಂಬಿದ್ದ ಮಂಜುನಾಥ್, ಹಂತ ಹಂತವಾಗಿ ₹ 2 ಲಕ್ಷ ಪಾವತಿಸಿದ್ದರು. ನಂತರ, ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.