ADVERTISEMENT

ಸಹಾಯದ ನೆಪದಲ್ಲಿ ₹64,500 ಕಿತ್ತ ವಿದೇಶಿ ಪ್ರಜೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 16:40 IST
Last Updated 7 ಜುಲೈ 2020, 16:40 IST

ಬೆಂಗಳೂರು: ‘ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಮರ್ಸಿ ಕ್ಲಿಂಟೋನಾ ಎಂಬಾತ, ಸಹಾಯ ಮಾಡುವ ನೆಪದಲ್ಲಿ ₹64,500 ಪಡೆದುಕೊಂಡು ವಂಚಿಸಿದ್ದಾನೆ’ ಎಂದು ಆರೋಪಿಸಿ ನರೇಂದ್ರ ಎಂಬುವರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ಸಹೋದರನಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಆರೋಪಿ ಮರ್ಸಿ, ಚಾಟಿಂಗ್ ಮಾಡುತ್ತಿದ್ದ. ಆತನ ವಾಟ್ಸ್‌ಆ್ಯಪ್ ನಂಬರ್ ಪಡೆದು ನಾನೂ ಸಂಪರ್ಕಿಸಿದ್ದೆ. ಹಣದ ಅವಶ್ಯಕತೆ ಇರುವುದಾಗಿ ಆತನಿಗೆ ಹೇಳಿದ್ದೆ. ಸಹಾಯ ಮಾಡುವುದಾಗಿ ತಿಳಿಸಿದ್ದ ಆತ, ಹಣ ಹಾಗೂ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದ.’

‘ಕೆಲ ದಿನಗಳ ನಂತರ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ವಿದೇಶದಲ್ಲಿರುವ ಮರ್ಸಿ ಎಂಬುವರು ಹಣ ಹಾಗೂ ಉಡುಗೊರೆ ಪಾರ್ಸೆಲ್ ಕಳುಹಿಸಿದ್ದಾರೆ. ಶುಲ್ಕ ಪಾವತಿಸಿದರೆ ನಿಮ್ಮ ವಿಳಾಸಕ್ಕೆ ಕಳುಹಿಸುತ್ತೇವೆ’ ಎಂದಿದ್ದ. ಅದನ್ನು ನಂಬಿ ಹಣ ಪಾವತಿ ಮಾಡಿದ್ದೆ’ ಎಂದು ದೂರಿನಲ್ಲಿ ನರೇಂದ್ರ ತಿಳಿಸಿದ್ದಾರೆ.

ADVERTISEMENT

ಸೈಬರ್ ಪೊಲೀಸರು, ‘ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಆರೋಪಿ ವಂಚಿಸಿರುವ ಸಾಧ್ಯತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.