ADVERTISEMENT

'ಬೆಂಗಳೂರು ನಗರ ಪೊಲೀಸ್' ನಕಲಿ ಖಾತೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 3:44 IST
Last Updated 27 ಆಗಸ್ಟ್ 2020, 3:44 IST
ಪಂಕಜ್ ಕುಮಾರ್ ಬಚಾವತ್
ಪಂಕಜ್ ಕುಮಾರ್ ಬಚಾವತ್   

ಬೆಂಗಳೂರು: 'ಬೆಂಗಳೂರು ನಗರ ಪೊಲೀಸ್' ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರದ ನಿವಾಸಿ ಪಂಕಜ್ ಕುಮಾರ್ ಬಚಾವತ್ (40) ಬಂಧಿತ ಆರೋಪಿ.

ಫೇಸ್‍ಬುಕ್‍ನಲ್ಲಿ 'ಬೆಂಗಳೂರು ಸಿಟಿ ಪೊಲೀಸ್' ಹೆಸರಿನ ಗುಂಪೊಂದನ್ನು ರಚಿಸಿ, ಅದರ ಅಡ್ಮಿನ್ ಆಗಿದ್ದ. ಈತ ಯಾವುದೇ ಪೋಸ್ಟ್ ಹಾಕುತ್ತಿರಲಿಲ್ಲ. ಆದರೆ, ಈ ಗುಂಪಿನಲ್ಲಿದ್ದ ಕೆಲ ಸದಸ್ಯರು ಅವಹೇಳನಕಾರಿ ಹಾಗೂ ದ್ವೇಷ ಬಿತ್ತುವ ಪೋಸ್ಟ್ ಗಳನ್ನು ಹಾಕುತ್ತಿದ್ದರು.

ADVERTISEMENT

2019ರಲ್ಲಿ ಆರೋಪಿ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ಜನರಿಗೆ ಸಹಾಯ ಮಾಡಲು ಫೇಸ್‍ಬುಕ್‍ನಲ್ಲಿ ಗ್ರೂಪ್ ರಚಿಸಿದ್ದಾಗಿ ಆರೋಪಿಯು ಪೊಲೀಸ್‌ ವಿಚಾರಣೆ ವೇಳೆ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.