ADVERTISEMENT

ನಿವೇಶನ ಆಮಿಷವೊಡ್ಡಿ ವಂಚನೆ: ನಿರ್ಮಾಪಕ ಬಂಧನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 19:36 IST
Last Updated 4 ಜೂನ್ 2022, 19:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಿವೇಶನ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಆರೋಪದಡಿ ಸಿನಿಮಾ ನಿರ್ಮಾಪಕ ಸೇರಿ ನಾಲ್ವರನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಂಜುನಾಥ್, ಶಿವಕುಮಾರ್, ಚಂದ್ರಶೇಖರ್ ಹಾಗೂ ಗೋಪಾಲ್ ಬಂಧಿತರು. ಹಣ ಕಳೆದುಕೊಂಡಿದ್ದ ಪುಷ್ಪಕುಮಾರ್ ಎಂಬುವರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಿನಿಮಾ ನಿರ್ಮಾಪಕ ಮಂಜು ನಾಥ್, 2015ರಲ್ಲಿ ನಟ ಕೋಮಲ್ ಅಭಿನಯದ ‘ಲೊಡ್ಡೆ’ ಸಿನಿಮಾ ನಿರ್ಮಿಸಿದ್ದರು. ಆದರೆ, ಸಿನಿಮಾ ಯಶಸ್ವಿಯಾಗಿರಲಿಲ್ಲ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು. ಇದರಿಂದ ಮಂಜುನಾಥ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ‘ಪುನಃ ಹಣ ಸಂಪಾದನೆಗಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಇಳಿದಿದ್ದ ಮಂಜುನಾಥ್, ‘ಈಗಲ್ ಟ್ರೀ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್’ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದ. ರಾಜಾಜಿನಗರದಲ್ಲಿ ಕಚೇರಿಯನ್ನೂ ತೆರೆದಿದ್ದ. ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ನಿವೇಶನ ಅಭಿವೃದ್ಧಿಪಡಿಸಿರುವುದಾಗಿ ಜಾಹೀರಾತು ನೀಡಿದ್ದ’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

‘ಜಾಹೀರಾತು ನೋಡಿದ್ದ ಪುಷ್ಪಕುಮಾರ್, ಕಚೇರಿಗೆ ಭೇಟಿ ನೀಡಿದ್ದರು. ನಿವೇಶನ ಖರೀದಿ ಬಗ್ಗೆ ಮಾತುಕತೆ ನಡೆಸಿದ್ದರು. ಬೆಂಗಳೂರು ಹೊರವಲಯದ ಲ್ಲಿರುವ ಅಪರಿಚಿತರ ಜಾಗ ತೋರಿಸಿದ್ದ ಆರೋಪಿಗಳು, ತಮ್ಮದೇ ಜಾಗವೆಂದು ಹೇಳಿಕೊಂಡಿದ್ದರು. ಅದನ್ನು ನಂಬಿದ್ದ ಪುಷ್ಪಕುಮಾರ್, ₹2 ಲಕ್ಷ ಮುಂಗಡ ಹಣ ನೀಡಿದ್ದರು. ಕೆಲ ದಿನಗಳ ನಂತರ ಆರೋಪಿಗಳ ಬಗ್ಗೆ ಅನುಮಾನ ಬಂದಿತ್ತು. ನಿವೇಶನ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿಗಳ ಕೃತ್ಯ ಬಯಲಾಗಿದೆ’ ಎಂದೂ ಹೇಳಿದರು.

‘ಕಂಪನಿ ಹೆಸರಿನಲ್ಲಿ ಯಾವುದೇ ನಿವೇಶನ ಅಭಿವೃದ್ಧಿಪಡಿಸಿರಲಿಲ್ಲ.
ಯಾರದ್ದೂ ನಿವೇಶನವನ್ನು ಗ್ರಾಹ ಕರಿಗೆ ತೋರಿಸಿ ಆರೋಪಿಗಳು ವಂಚಿಸುತ್ತಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.