ADVERTISEMENT

ಸಚಿವ ಈಶ್ವರಪ್ಪ ನಿವಾಸದಲ್ಲಿ ಬೆಂಕಿ ಅನಾಹುತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2020, 19:12 IST
Last Updated 16 ಮಾರ್ಚ್ 2020, 19:12 IST
ಸಚಿವ ಈಶ್ವರಪ್ಪ ನಿವಾಸದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.
ಸಚಿವ ಈಶ್ವರಪ್ಪ ನಿವಾಸದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.   

ಬೆಂಗಳೂರು: ನಗರದ ಕುಮಾರಪಾರ್ಕ್‌ನಲ್ಲಿರುವಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರ ಸರ್ಕಾರಿ ವಸತಿ ಗೃಹದಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಅಗ್ನಿ ಆಕಸ್ಮಿಕ ಸಂಭವಿಸಿಬಂಗಲೆಯ ವಿದ್ಯುತ್ ವೈರಿಂಗ್ ಮತ್ತು ಮರದ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.

ಭಾರಿ ಅಪಾಯದಿಂದ ಸಚಿವ ಈಶ್ವರಪ್ಪ ಹಾಗೂ ಅವರ ಪತ್ನಿ ಅಪಾಯದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ.ಸಚಿವರು ಮಲಗುವ ಕೋಣೆಯ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಎಸಿ ಸ್ವಿಚ್ ಹಾಕಿದ ತಕ್ಷಣ ಶಾರ್ಟ್‌ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿತು.

ತಕ್ಷಣ ಅಳಿಯ ಸಂತೋಷ್ ಅವರಿಗೆ ಈಶ್ವರಪ್ಪ ವಿಷಯ ತಿಳಿಸಿದರು. ಸಂತೋಷ್ ಮಾಹಿತಿ ನೀಡುತ್ತಿದ್ದಂತೆಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.

ADVERTISEMENT

ಕ್ಷಣದಲ್ಲಿ ಕೊಠಡಿಸಂಪೂರ್ಣ ಭಸ್ಮವಾಗಿದೆ.ಕೊಠಡಿಯಲ್ಲಿದ್ದ ಮಂಚ, ಹಾಸಿಗೆ, ಎಸಿ, ಬಟ್ಟೆಗಳು ಸುಟ್ಟು ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.