ADVERTISEMENT

‘5 ವರ್ಷ ಸೇವಾವಧಿ ಪೂರೈಕೆ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2018, 19:20 IST
Last Updated 14 ಜುಲೈ 2018, 19:20 IST

ಬೆಂಗಳೂರು: ‘ಬಿ.ಕೆ.ಪವಿತ್ರಾ ಪ್ರಕರಣದಡಿ ಸೇವಾ ಹಿರಿತನ ನಿರ್ಧರಿಸುವಾಗ ಪರಿಗಣಿತ ಪದೋನ್ನತಿ ದಿನಾಂಕ ನಿಜವಾಗಿ ಪದೋನ್ನತಿ ಹೊಂದಿದ ದಿನಾಂಕಕ್ಕಿಂತ ಹಿಂದಿನ ದಿನಾಂಕಕ್ಕೆ ನಿಗದಿಯಾಗಬಹುದಾಗಿದೆ. ಹೀಗಾಗಿ, ನಮ್ಮ ಪರಿಗಣಿತ ಪದೋನ್ನತಿ ದಿನಾಂಕ 2012 ಹಾಗೂ 2013ರ ಸಾಲಿಗೆ ನಿಗದಿಯಾಗಿದೆ’ ಎಂದು ಅರಣ್ಯ ಇಲಾಖೆಯ 17 ಡಿಸಿಎಫ್‌ಗಳು ತಿಳಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಶನಿವಾರ ಪ್ರಕಟವಾದ ‘ಬಡ್ತಿಯಲ್ಲಿ ಅರಣ್ಯ ನ್ಯಾಯ’ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಹುದ್ದೆಯಿಂದ ಡಿಸಿಎಫ್‌ ಹುದ್ದೆಗೆ ಮುಂಬಡ್ತಿ ಹೊಂದಲು ಬೇಕಾದ ಕನಿಷ್ಠ 5 ವರ್ಷಗಳ ಸೇವಾವಧಿಯನ್ನು ಪೂರೈಸಿದ್ದೇವೆ’ ಎಂದಿದ್ದಾರೆ.

‘ಮೂವರು ನಿವೃತ್ತ
ಅರಣ್ಯಾಧಿಕಾರಿಗಳು ಹೊಟ್ಟೆ ಕಿಚ್ಚಿನಿಂದ ನಮ್ಮ ವಿರುದ್ಧ ದೂರು ನೀಡಿದ್ದಾರೆ. ಅವರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಅವರು ಸರ್ಕಾರದ ಪಿಂಚಣಿ ಪಡೆಯುತ್ತಿದ್ದಾರೆ. ಅವರ ವಿರುದ್ಧ ಕೆಸಿಎಸ್‌ಆರ್‌ ನಿಯಮದಂತೆ ಕ್ರಮ ಜರುಗಿಸಬೇಕು’ ಎಂದು ಡಿಸಿಎಫ್‌ ಜಗನ್ನಾಥ್‌ ಎನ್‌.ಎಚ್‌. ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.