ADVERTISEMENT

ವಿಮಾನ ನಿಲ್ದಾಣಗಳಲ್ಲಿ ಪ್ರಜ್ವಲ್‌ಗಾಗಿ ನಿಗಾ

* ಲೈಂಗಿಕ ದೌರ್ಜನ್ಯ ಪ್ರಕರಣ * ವಿಡಿಯೊ ಹರಿಬಿಟ್ಟ ಆರೋಪದಡಿ ಇಬ್ಬರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 12 ಮೇ 2024, 18:55 IST
Last Updated 12 ಮೇ 2024, 18:55 IST
<div class="paragraphs"><p> ವಿಮಾನ ನಿಲ್ದಾಣಗಳಲ್ಲಿ ನಿಗಾ</p></div>

ವಿಮಾನ ನಿಲ್ದಾಣಗಳಲ್ಲಿ ನಿಗಾ

   

ಬೆಂಗಳೂರು: ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಸಾದಂತೆ ವಶಕ್ಕೆ ಪಡೆಯಲು ಎಸ್‌ಐಟಿ ಅಧಿಕಾರಿಗಳು ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ತೀವ್ರ ನಿಗಾ ವಹಿಸಿದ್ದಾರೆ. 

ಪ್ರಜ್ವಲ್‌ ವಿರುದ್ಧ ಬ್ಲೂಕಾರ್ನರ್ ನೋಟಿಸ್‌ ಜಾರಿಯಾಗಿದ್ದು, ಶೋಧ ನಡೆದಿದೆ. ಈ ಮಧ್ಯೆ, ಯಾವುದೇ ನಿಲ್ದಾಣದ ಮೂಲಕ ರಾಜ್ಯಕ್ಕೆ ಮರಳಿದರೂ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಪ್ರಜ್ವಲ್‌ ಜರ್ಮನಿಯಲ್ಲಿಲ್ಲ ಎಂಬುದು ಈಗಾಗಲೇ ಗೊತ್ತಾಗಿದೆ. ಅವರು ದುಬೈನಲ್ಲಿರುವ ಮಾಹಿತಿ ಇದೆ. ದುಬೈನಿಂದಲೇ ಅವರು ಬೆಂಗಳೂರು ಅಥವಾ ಮಂಗಳೂರು ನಿಲ್ದಾಣಕ್ಕೆ ಬರುವ ನಿರೀಕ್ಷೆಯೂ ಇದೆ. ಸದ್ಯಕ್ಕೆ ಅವರು ಯಾವುದೇ ಟಿಕೆಟ್ ಕಾಯ್ದಿರಿಸಿಲ್ಲ’ ಎಂದು ಮೂಲಗಳು ತಿಳಿಸಿವೆ.

ಸಂತ್ರಸ್ತೆಯರಿಂದ ಹೇಳಿಕೆ ಸಂಗ್ರಹ: ‘ಸಹಾಯವಾಣಿಗೆ ನಿತ್ಯವೂ ಕರೆಗಳು ಬರುತ್ತಿವೆ. ಕೆಲ ಸಂತ್ರಸ್ತೆಯರು, ಹೇಳಿಕೆ ನೀಡುವುದಾಗಿ ಹೇಳಿದ್ದಾರೆ. ಅವರಿಗೆ ಕೌನ್ಸೆಲಿಂಗ್‌ ಮಾಡಲಾಗುತ್ತಿದೆ. ಸಂತ್ರಸ್ತೆಯರಿಗೆ ಹಾಗೂ ಅವರ ಕುಟುಂಬದವರಿಗೆ ಧೈರ್ಯ ತುಂಬಿದ ಬಳಿಕವೇ ಹೇಳಿಕೆ ದಾಖಲಿಸಿಕೊಂಡು, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.