ADVERTISEMENT

ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ದುರವಸ್ಥೆ ಬಗ್ಗೆ ದೂರು ನೀಡಲು ಎಫ್‌ಎಂಎಸ್‌ ಆ್ಯಪ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 22:19 IST
Last Updated 6 ಜನವರಿ 2023, 22:19 IST
ಬಿಬಿಎಂಪಿ
ಬಿಬಿಎಂಪಿ    

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಗುಂಡಿ ಸೇರಿದಂತೆ ದುರವಸ್ಥೆ ಬಗ್ಗೆ ‘ಫಿಕ್ಸ್‌ ಮೈ ಸ್ಟ್ರೀಟ್‌’(ಎಫ್‌ಎಂಎಸ್‌) ಆ್ಯಪ್‌ ಮೂಲಕ ನಾಗರಿಕರು ದೂರು ನೀಡಬಹುದು.

ಬಿಬಿಎಂಪಿ ಎಂಜಿನಿಯರ್‌ಗಳು ಬಳಸುತ್ತಿದ್ದ ‘ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಇದೀಗ ಸಾರ್ವಜನಿಕರಿಗೆ ಲಭ್ಯವಿದೆ. ದಾಸರಹಳ್ಳಿ ಹೊರತುಪಡಿಸಿದಂತೆ ಇತರೆ ಎಲ್ಲ ವಲಯದ ಮುಖ್ಯ ರಸ್ತೆಗಳು ಗುಂಡಿ ಮುಕ್ತವಾಗಿವೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಪಶ್ಚಿಮ ವಲಯದ ಮಲ್ಲೇಶ್ವರ ಉಪ ವಿಭಾಗದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ADVERTISEMENT

‘ನಮ್ಮ ಕ್ಲಿನಿಕ್‌’ ಬಿಬಿಎಂಪಿ ವ್ಯಾಪ್ತಿಯ 108 ಪ್ರದೇಶಗಳಲ್ಲಿ ಜ.15ರೊಳಗೆ ಆರಂಭವಾಗಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.