ಬೆಂಗಳೂರು: ವಸತಿ ಗೃಹದಲ್ಲಿ ನಿಯಮ ಉಲ್ಲಂಘಿಸಿ ವಿದೇಶಿ ಪ್ರಜೆಗಳಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ ಆರೋಪದಡಿ ನಗರದ ರಾಯಲ್ ಗ್ರ್ಯಾಂಡ್ ಲಾಡ್ಜ್ ವ್ಯವಸ್ಥಾಪಕ ಸೇರಿ ಮೂವರ ವಿರುದ್ಧ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶಿ ಪ್ರಜೆಗಳಿಗೆ ಮನೆ, ಕಚೇರಿ, ವಸತಿ ಗೃಹ ಸೇರಿ ಇತರ ಕಡೆ ವಾಸ್ತವ್ಯ ನೀಡುವ ಮುನ್ನ ಎಫ್‌ಆರ್‌ಆರ್‌ಓ (ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ) ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ‘ಸಿ’ ಫಾರ್ಮ್ ಭರ್ತಿಯೊಂದಿಗೆ ಮಾಹಿತಿ ನೀಡಬೇಕೆಂಬ ನಿಯಮವಿದೆ. ಆದರೆ, ರಾಯಲ್ ಗ್ರ್ಯಾಂಡ್ ಲಾಡ್ಜ್‌ನವರು ನಿಯಮ ಪಾಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಿಟನ್ ಹಾಗೂ ಉತ್ತರ ಐರ್ಲೆಂಡ್‌ನ ಪ್ರಜೆಗಳಾದ ಮುಖೇಶ್ ಶಾಮ್ಜಿ ಗೊಹಿಲ್, ಅಲ್ಪಾಬೇನ್ ಗೊಹಿಲ್, ಕು.ಮಿಷಾ ಮುಖೇಶ್ ಗೊಹಿಲ್, ಅರನ್ ಮುಖೇಶ್ ಗೊಹಿಲ್ ಎಂಬುವರು ವಸತಿ ಗೃಹದಲ್ಲಿ ವಾಸವಾಗಿದ್ದರು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.