ADVERTISEMENT

ನಾಲ್ವರು ಕಲಾವಿದರಿಗೆ ‘ಆಶ್ವಾಸನ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 1:45 IST
Last Updated 11 ಅಕ್ಟೋಬರ್ 2022, 1:45 IST
ನಾರಾಯಣ ಭಟ್ಟ
ನಾರಾಯಣ ಭಟ್ಟ   

ಬೆಂಗಳೂರು: ಪ್ರಸಕ್ತ ವರ್ಷದ ‘ಆಶ್ವಾಸನ’ ಪ್ರಶಸ್ತಿಗೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಎಲೆಮರೆಯ ಕಾಯಿಯಂತೆ ಇರುವವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ದಾಂಡೇಲಿಯ ಉಸ್ತಾದ್‌ ಕಾಸಿಂ ಜಮಾದಾರ್‌, ಯಕ್ಷಗಾನಕ್ಕಾಗಿ ಶಿವಮೊಗ್ಗದ ನಿಟ್ಟೂರಿನ ಸಂತೆಗುಳಿ ನಾರಾಯಣ ಭಟ್ಟ, ಚಿತ್ರಕಲೆ ಮತ್ತು ನಾಟಕಕ್ಕಾಗಿಉತ್ತರ ಕನ್ನಡ ಜಿಲ್ಲೆಯ ಕೆಕ್ಕಾರಿನ ಜಿ.ಡಿ.ಭಟ್ಟ,
ಕರಕುಶಲ ಕಲೆಗಾಗಿ ನವಲಗುಂದದ ರಹಮತ್ತಾಭೀಕುತುಬುಬ್ಬಿನ್‌ ಪಾವಟೆಕರ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರಿಗೆ ಸ್ಮರಣಿಕೆ ಹಾಗೂ ₹15 ಸಾವಿರ ನೀಡಿ ಗೌರವಿಸಲಾಗುವುದು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಿ.ಎಸ್.‌ ಹೆಗಡೆ ತಿಳಿಸಿದ್ದಾರೆ.

ADVERTISEMENT

ಘರಾಣಾದ ಪ್ರಸಿದ್ಧ ಗಾಯಕಿ ಲಲಿತಾ ಶಿವರಾಮ ಉಭಯಕರ್‌ ಅವರು1993ರಲ್ಲಿ ‘ಆಶ್ವಾಸನ ಫೌಂಡೇಷನ್‌’ ಸ್ಥಾಪಿಸಿದ್ದರು.

ಇದೇ 15ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದುಅಧ್ಯಕ್ಷೆ ಮಾಲವಿಕಾ ಬಿಜೂರ ಉಭಯಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.