ಬೆಂಗಳೂರು: ‘ಭವಿಷ್ಯನಿಧಿ ಹಣವನ್ನು ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಖಾಸಗಿ ಬಾಂಡ್‌ಗಳಲ್ಲಿ ತೊಡಗಿಸಿದರೆ ಬಡ್ಡಿ ದರ ಹೆಚ್ಚಿರುತ್ತದೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಸರ್ಕಾರಿ ಬಾಂಡ್‌ಗಳಲ್ಲಿ ಹೂಡುವುದೇ ಉತ್ತಮ’ ಎಂದು ಭವಿಷ್ಯ ನಿಧಿ ಸಂಘಟನೆಯ ಕೇಂದ್ರ ಹೆಚ್ಚುವರಿ ಆಯುಕ್ತ ಆರ್.ಕೆ. ಸಿಂಗ್ ಸಲಹೆ ನೀಡಿದರು.
ಕಂಪನಿಗಳು ಭವಿಷ್ಯ ನಿಧಿಯ ಮೊತ್ತವನ್ನು ಸರ್ಕಾರಿ ಮತ್ತು ಖಾಸಗಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಕುರಿತು ಎಸ್‌ಬಿಐನ ಡಿಎಫ್‌ಎಚ್‌ಐ (ಡಿಸ್ಕೌಂಟ್ ಆ್ಯಂಡ್ ಫೈನಾನ್ಸ್ ಹೌಸ್ ಆಫ್ ಇಂಡಿಯಾ) ಸಂಸ್ಥೆಯು ಶುಕ್ರವಾರ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಕಂಪನಿಗಳ ಮಾಲೀಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಕುರಿತು ಸಲಹೆ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಈ ಎಸ್‌ಬಿಐ ಡಿಎಫ್‌ಎಚ್‌ಐಯನ್ನು ರೂಪಿಸಿದೆ. ಡಿಎಫ್‌ಎಚ್‌ಐ ಮೂಲಕ ವಿವಿಧ ಕಂಪನಿಗಳು 2019ರ ಮಾರ್ಚ್ 31ರ ವೇಳೆಗೆ ಒಟ್ಟು ₹965.39 ಕೋಟಿಯನ್ನು ವಿವಿಧ ಕಂಪನಿಗಳು ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿವೆ.
ಎಸ್‌ಬಿಐ ಡಿಎಫ್‌ಎಚ್‌ಐನ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ. ಶಾಸ್ತ್ರಿ, ಪ್ರಾದೇಶಿಕ ಮುಖ್ಯಸ್ಥ ಹೇಮಂತ್ ಅಧಿಕಾರಿ, ಹಿರಿಯ ಸಂವಹನ ವ್ಯವಸ್ಥಾಪಕ ಪ್ರವೀಣ್ ಸಿಂಗ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.