ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) 2025–26ನೇ ಸಾಲಿನ ಅಧ್ಯಕ್ಷರಾಗಿ ಬಿ.ಆರ್. ಗಣೇಶ್ ರಾವ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
‘ಅನುಭವಿ ಉದ್ಯಮಿ ಆಗಿರುವ ಅವರು ಎರಡು ದಶಕಗಳಿಗೂ ಹೆಚ್ಚು ಅವಧಿಯಿಂದ ಪೀಣ್ಯ ಕೈಗಾರಿಕೆಗಳ ಸಂಘ (ಪಿಐಎ) ಮತ್ತು ಕಾಸಿಯಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.
ರಾವ್ ಅವರು ಕಾಸಿಯಾದಲ್ಲಿ ಖಜಾಂಚಿ, ಉಪ-ಸಮಿತಿ ಅಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಕಾಸಿಯಾದ ಹೊಸ ಪದಾಧಿಕಾರಿಗಳು: ನಿಂಗಣ್ಣ ಎಸ್. ಬಿರಾದರ್ (ಉಪಾಧ್ಯಕ್ಷರು), ಎಸ್.ಎಂ. ಹುಸೇನ್ (ಗೌರವ ಪ್ರಧಾನ ಕಾರ್ಯದರ್ಶಿ), ಆರ್. ಕೇಶವ ಮೂರ್ತಿ (ಜಂಟಿ ಕಾರ್ಯದರ್ಶಿ – ನಗರ), ದಿನೇಶ್ ಕುಮಾರ್ ವಿ. (ಜಂಟಿ ಕಾರ್ಯದರ್ಶಿ – ಗ್ರಾಮೀಣ), ಆರ್. ದುರೈ (ಖಜಾಂಚಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.