ADVERTISEMENT

ಕಲ್ಲಿದ್ದಲು ಟ್ರಕ್‌ನಲ್ಲಿ ಗಾಂಜಾ ಸಾಗಣೆ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 18:54 IST
Last Updated 21 ಫೆಬ್ರುವರಿ 2019, 18:54 IST

ಬೆಂಗಳೂರು: ಕಲ್ಲಿದ್ದಲು ಪುಡಿ ಜೊತೆ ಬಚ್ಚಿಟ್ಟು ಟ್ರಕ್‌ನಲ್ಲಿ ಸಾಗಿಸುತ್ತಿದ್ದ 1,020 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿರುವ ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು, ಬೀದರ್‌ನ ಚಾಲಕನೊಬ್ಬನನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ಟ್ರಕ್‌ನಲ್ಲಿ ಕಲ್ಲಿದ್ದಲು ಪುಡಿಯ ಜೊತೆ ಗಾಂಜಾವನ್ನು ತೆಲಂಗಾಣಕ್ಕೆ ಸಾಗಿಸಲಾಗುತ್ತಿತ್ತು. ಆ ಬಗ್ಗೆ ಮಾಹಿತಿ ಪಡೆದು ಹೈದರಾಬಾದ್‌ನ ರಾಜೇಂದ್ರನಗರದಲ್ಲಿ ಟ್ರಕ್‌ ತಡೆದಿದ್ದ ಅಧಿಕಾರಿಗಳು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಟ್ರಕ್‌ನಲ್ಲಿದ್ದ ಕಲ್ಲಿದ್ದಲು ಪುಡಿಯನ್ನು ಜೆಸಿಬಿ ಯಂತ್ರದಿಂದ ಅಗೆದು ತೆಗೆಸಿದ್ದ ಅಧಿಕಾರಿಗಳು, ಬಚ್ಚಿಟ್ಟಿದ್ದ ಗಾಂಜಾ ಪೊಟ್ಟಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ADVERTISEMENT

‘ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಗಾಂಜಾ ಸಾಗಣೆ ಜಾಲ ಸಕ್ರಿಯವಾಗಿದೆ. ಟ್ರಕ್‌ನಲ್ಲಿ ಕಲ್ಲಿದ್ದಲು ಪುಡಿ ಜೊತೆ ಗಾಂಜಾ ಸಾಗಿಸುವ ಮಾರ್ಗ ಕಂಡುಕೊಂಡಿದ್ದು ಇದೀಗ ಪತ್ತೆಯಾಗಿದೆ’ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.