ADVERTISEMENT

ಭೂಗರ್ಭ ಬಾಹ್ಯಾಕಾಶ ತಂತ್ರಜ್ಞಾನ–ತರಬೇತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:21 IST
Last Updated 22 ಆಗಸ್ಟ್ 2019, 20:21 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಭೂಗರ್ಭ ವಿಜ್ಞಾನ ಮತ್ತು ಭೂಗರ್ಭ ಮಾಹಿತಿ ವಿಭಾಗದ ವತಿಯಿಂದ, ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಸಹಯೋಗದಲ್ಲಿ ‘ಭೂಗರ್ಭ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿನೂತನ
ತಂತ್ರಜ್ಞಾನಗಳು’ ಎಂಬ ವಿಷಯದಲ್ಲಿ 21 ದಿನಗಳ ತರಬೇತಿ ಮತ್ತು ಕಾರ್ಯಾಗಾರ ಭೂಗರ್ಭ ವಿಭಾಗದಲ್ಲಿ ಸೆ.9ರಿಂದ 29ರವರೆಗೆ ನಡೆಯಲಿದೆ.

ಇಸ್ರೊದ ಹಿರಿಯ ವಿಜ್ಞಾನಿಡಾ.ಅಶೋಕ್‌ ಡಿ. ಹಂಜಗಿ ಅವರು ಕಾರ್ಯಾಗಾರದ ನಿರ್ದೇಶಕರಾಗಿರುತ್ತಾರೆ.

www.bangaloreuniversity.ac.in ವೆಬ್‌ಸೈಟ್‌ನಿಂದ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.