ADVERTISEMENT

ಶಿವಗಂಗೆಯಲ್ಲಿ ಗಿರಿಜಾ ಕಲ್ಯಾಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 20:00 IST
Last Updated 15 ಜನವರಿ 2019, 20:00 IST
ಅಲಂಕೃತ ಗಂಗಾಧರೇಶ್ವರ ಮತ್ತು ಸ್ವರ್ಣಾಂಬಾ ದೇವಿ ವಿಗ್ರಹಗಳು
ಅಲಂಕೃತ ಗಂಗಾಧರೇಶ್ವರ ಮತ್ತು ಸ್ವರ್ಣಾಂಬಾ ದೇವಿ ವಿಗ್ರಹಗಳು   

ದಾಬಸ್‌ಪೇಟೆ: ಮಕರ ಸಂಕ್ರಾಂತಿ ಪ್ರಯುಕ್ತ ಶಿವಗಂಗೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ನೆರವೇರಿತು.

ಸೋಮವಾರ ರಾತ್ರಿ 11.06ಕ್ಕೆ ಕಕುದ್ಗಿರಿ ಶಿಖರದಲ್ಲಿ ತೀರ್ಥ ಉದ್ಭವವಾಯಿತು. ಪುರೋಹಿತರು ತೀರ್ಥವನ್ನು ವೇದಘೋಷ, ಮಂಗಳವಾದ್ಯದೊಂದಿಗೆ ಗಂಗಾಧರೇಶ್ವರ ಸನ್ನಿಧಿಗೆ ತಂದು ಧಾರಾ ವಿಧಿ ನಡೆಸಿದರು.

ಈ ವರ್ಷ ಕಕುದ್ಗಿರಿ ಶಿಖರದಲ್ಲಿ ಹೆಚ್ಚಿನ ತೀರ್ಥ ಉದ್ಭವವಾಗಿರುವುದರಿಂದ ಈ ವರ್ಷವೂ ಉತ್ತಮ ಮಳೆ ಬೆಳೆಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಸುಮಾರು 40 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು.

ADVERTISEMENT

ಸಂಸದ ವೀರಪ್ಪ ಮೊಯಿಲಿ, ಶಾಸಕ ಡಾ.ಕೆ.ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.