ADVERTISEMENT

ಇಂಡೊ-ಜರ್ಮನ್ ಸಂಶೋಧನಾ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 21:15 IST
Last Updated 19 ಏಪ್ರಿಲ್ 2021, 21:15 IST
ಇಂಡೊ-ಜರ್ಮನ್ ಸಹಭಾಗಿತ್ವ ಸಂಶೋಧನೆ ಯೋಜನೆಯನ್ನು (ಎಡದಿಂದ ಎರಡನೆಯವರು) ಜರ್ಮನಿಯ ಕ್ಯಾಸೆಲ್ ವಿಶ್ವವಿದ್ಯಾಲಯದ ಯೋಜನೆ ಸಂಯೋಜಕ ಆಂಡ್ರಿಯಾಸ್ ಬ್ಯುಕರ್ಟ್ ಉದ್ಘಾಟಿಸಿದರು. ಕಾರ್ಲ್ ಎಹ್ಲೆರ್ಡಿಂಗ್, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ರಾಜೇಂದ್ರ ಪ್ರಸಾದ್, ಸಂಶೋಧನಾ ನಿರ್ದೇಶಕ ವೈ.ಜಿ.ಷಡಕ್ಷರಿ ಹಾಗೂ ಕೆ.ಬಿ.ಉಮೇಶ್ ಇದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು:‘ಕೃಷಿಯಲ್ಲಿ ವಲಸೆ ಬಹುಮುಖ್ಯ ಸವಾಲು. ಪ್ರಸ್ತುತ ವಿಶ್ವವ್ಯಾಪಿ ಶೇ 3ರಷ್ಟು ವಲಸೆ ಇದೆ. 2030ರ ವೇಳೆಗೆ ಈ ಪ್ರಮಾಣ ಶೇ 7ಕ್ಕೆ ಏರಲಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಕುಲಪತಿಎಸ್.ರಾಜೇಂದ್ರ ಪ್ರಸಾದ್ ತಿಳಿಸಿದರು.

‌ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಸೋಮವಾರ ನಡೆದ ‘ಬೆಂಗಳೂರಿನ ಗ್ರಾಮೀಣ-ನಗರ ಅಂತರ ಸಂಪರ್ಕ ಸಾಧನ:ಕೃಷಿ ಆರ್ಥಿಕತೆ ಮತ್ತು ಸಮಾಜದಲ್ಲಿ ಪರಿವರ್ತನೆ’ ಶೀರ್ಷಿಕೆಯಡಿ ಇಂಡೊ-ಜರ್ಮನ್ ಸಹಭಾಗಿತ್ವದ ಎರಡನೇ ಹಂತದ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೃಷಿಯಲ್ಲಿ ವಲಸೆ ಸಮಸ್ಯೆಯನ್ನು ನಿವಾರಿಸಲು ಕಾರ್ಯತಂತ್ರ ರೂಪಿಸುವು ಅಗತ್ಯ. ನಗರೀಕರಣದಿಂದ ಹಲವಾರು ಸಮಸ್ಯೆಗಳು ಎದುರಾಗಿದ್ದು, ಇದನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸಲು ಕೃಷಿ ವಿಶ್ವವಿದ್ಯಾನಿಲಯದ ಇಂಡೊ- ಜರ್ಮನ್ ಯೋಜನೆ ಕಾರ್ಯನಿರ್ವಹಿಸುತ್ತಿದೆ’ ಎಂದರು.

ADVERTISEMENT

ಜರ್ಮನ್ ರಾಯಭಾರ ಕಚೇರಿಯ ಉಪ ಕಾನ್ಸುಲ್ ಜನರಲ್ಕಾರ್ಲ್ ಎಹ್ಲೆರ್ಡಿಂಗ್,‘ಹವಾಮಾನ ವೈಪರೀತ್ಯದಿಂದ ಕೃಷಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಇವುಗಳಿಗೆ ತಕ್ಕಂತೆ ಕಾರ್ಯತಂತ್ರ ರೂಪಿಸುವುದು ಸೂಕ್ತ’ ಎಂದರು.

ವಿಶ್ವವಿದ್ಯಾಲಯದಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಬಿ.ಉಮೇಶ್,‘1960ರಲ್ಲಿ ಶೇ 18ರಷ್ಟು ಇದ್ದನಗರೀಕರಣ, ಪ್ರಸ್ತುತ ಶೇ.30ರಷ್ಟಕ್ಕೆ ಹೆಚ್ಚಿದೆ. ಇದನ್ನುಎದುರಿಸುವ ಉದ್ದೇಶದಿಂದ ಯೋಜನೆಯ ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.