ADVERTISEMENT

ಗುದದ್ವಾರದಲ್ಲಿದ್ದ 442 ಗ್ರಾಂ ಚಿನ್ನ ಜಪ್ತಿ: ಪ್ರಯಾಣಿಕ ಬಂಧನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 21:22 IST
Last Updated 1 ಸೆಪ್ಟೆಂಬರ್ 2022, 21:22 IST

ಬೆಂಗಳೂರು: ವಿಮಾನ ನಿಲ್ದಾಣ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ₹ 22 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವೈಮಾನಿಕ ಗುಪ್ತಚರ ದಳದ (ಎಐಯು) ಅಧಿಕಾರಿಗಳು ಜಪ್ತಿ ಮಾಡಿದ್ದು, ಪ್ರಯಾಣಿಕರೊಬ್ಬರನ್ನು ಬಂಧಿಸಿದ್ದಾರೆ.

‘ಬ್ಯಾಂಕಾಕ್‌ನಿಂದ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಯಾಣಿಕ, ಮಾತ್ರೆ ರೂಪದಲ್ಲಿದ್ದ ಚಿನ್ನವನ್ನು ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡಿದ್ದ. ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದ’ ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ.

‘ವಿಮಾನದ ಮೂಲಕ ಚಿನ್ನ ಸಾಗಣೆ ಬಗ್ಗೆ ಆಗಸ್ಟ್ 30ರಂದು ಮಾಹಿತಿ ಬಂದಿತ್ತು. ಪ್ರಯಾಣಿಕರನ್ನು ಪರಿಶೀಲಿಸಿದಾಗ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಆರೋಪಿ ನಡೆಯಿಂದ ಹೆಚ್ಚಿನ ಅನುಮಾನ ಬಂದಿತ್ತು. ವೈದ್ಯರ ಸಹಾಯದಿಂದ ದೇಹದ ಸ್ಕ್ಯಾನಿಂಗ್ ಮಾಡಿದಾಗ ಗುದದ್ವಾರದಲ್ಲಿ 442 ಗ್ರಾಂ ಚಿನ್ನವಿತ್ತು’ ಎಂದು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.