ADVERTISEMENT

ಬೆಂಗಳೂರು: ಜ್ಯುವೆಲ್ಲರ್ಸ್‌ ಮಾಲೀಕರಿಗೆ ವಂಚಿಸಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 12:43 IST
Last Updated 29 ಡಿಸೆಂಬರ್ 2021, 12:43 IST
ಪೊಲೀಸರು ಜಪ್ತಿ ಮಾಡಿದ ಚಿನ್ನಾಭರಣ
ಪೊಲೀಸರು ಜಪ್ತಿ ಮಾಡಿದ ಚಿನ್ನಾಭರಣ   

ಬೆಂಗಳೂರು: ಆಭರಣ ಮಾಡಿಕೊಡುವುದಾಗಿ ಚಿನ್ನದ ಅಂಗಡಿ ಮಾಲೀಕರಿಂದ ಚಿನ್ನದ ಗಟ್ಟಿ ಹಾಗೂ ಆಭರಣಗಳನ್ನು ಪಡೆದು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಜಯನಗರದ ಸುನೀಲ್ ಕುಮಾರ್ ಬೌಲ್ (63) ಬಂಧಿತ ಆರೋಪಿ.

‌ಈತ ಜಯನಗರದ ಜ್ವಾಲಮಾಲ ಜ್ಯುವೆಲ್ಲರ್ಸ್‌ನ ಮಾಲೀಕ ರಾಕೇಶ್‌ ಬೆಳ್ಳೂರು,ಅಲಂಕೃತಿ ಜ್ಯುವೆಲ್ಲರ್ಸ್‌ನ ರಾಜೇಶ್‌ ಹಾಗೂ ಕಬ್ಬನ್‌ ಪಾರ್ಕ್ ಠಾಣಾ ವ್ಯಾಪ್ತಿಯ ನವರತನ್ ಜ್ಯುವೆಲ್ಲರ್ಸ್‌ನ ಮಾಲೀಕರಿಗೆ ಆಭರಣಗಳನ್ನು ಮಾಡಿಕೊಡುವುದಾಗಿ ಹೇಳಿ, ಚಿನ್ನದ ಆಭರಣಗಳು ಹಾಗೂ ಚಿನ್ನದ ಗಟ್ಟಿ ಪಡೆದಿದ್ದ. ಆದರೆ, ಆಭರಣ ಮಾಡಿಕೊಡದೆ ತಲೆಮರೆಸಿಕೊಂಡಿದ್ದ. ಈ ಸಂಬಂಧಸುನೀಲ್ ವಿರುದ್ಧ ಜಯನಗರ ಹಾಗೂ ಕಬ್ಬನ್‌ ಪಾರ್ಕ್‌ ಠಾಣೆಗಳಲ್ಲಿದೂರುಗಳು ದಾಖಲಾಗಿದ್ದವು.

ADVERTISEMENT

‘ಆರೋಪಿ ಪತ್ತೆಗೆ ರಚಿಸಲಾಗಿದ್ದ ವಿಶೇಷ ತಂಡಕ್ಕೆ ಸುನೀಲ್‌ ಸಿಕ್ಕಿಬಿದ್ದ. ವಿಚಾರಣೆ ನಡೆಸಿದಾಗ ಅವೆನ್ಯೂ ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್‌ ಲೋನ್‌ ಕಂಪನಿಯಲ್ಲಿ ಚಿನ್ನ ಅಡವಿಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಆರೋಪಿ ಅಡವಿಟ್ಟಿದ್ದ ₹55 ಲಕ್ಷ ಬೆಲೆ ಬಾಳುವ ಸುಮಾರು 947 ಗ್ರಾಂ ತೂಕದ ವಿವಿಧ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.