ADVERTISEMENT

ಸರ್ಕಾರಿ ಆಸ್ಪತ್ರೆ: ವಾಟ್ಸ್‌ಆ್ಯಪ್‌ ಮೂಲಕ ದೂರು ಸಲ್ಲಿಕೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:30 IST
Last Updated 1 ಜೂನ್ 2025, 15:30 IST
<div class="paragraphs"><p>.</p></div>

.

   

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳು ಅಥವಾ ಆರೋಗ್ಯ ಸೇವೆಗಳ ಬಗ್ಗೆ ದೂರುಗಳಿದ್ದರೆ ಅವುಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಕಳಿಸುವ ಅವಕಾಶವನ್ನು ಆರೋಗ್ಯ ಇಲಾಖೆ ಕಲ್ಪಿಸಿದೆ.

9449843001 ಈ ಮೊಬೈಲ್‌ ಸಂಖ್ಯೆಗೆ ದೂರುಗಳ ಜತೆಗೆ ಸಲಹೆಗಳನ್ನು ರೋಗಿಗಳು, ಅವರ ಸಹಾಯಕರು ಹಾಗೂ ಸಾರ್ವಜನಿಕರು ಕಳುಹಿಸಬಹುದಾಗಿದೆ. ಅಗತ್ಯವಿದ್ದರೆ ದೂರುಗಳಿಗೆ ಸಂಬಂಧಿಸಿದ ಫೋಟೊ ಹಾಗೂ ವಿಡಿಯೊಗಳನ್ನೂ ಕಳುಹಿಸುವಂತೆ ಇಲಾಖೆ ತಿಳಿಸಿದೆ.

ADVERTISEMENT

ದೂರುಗಳನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರೇ ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತಾರೆ. ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು. ವಾಟ್ಸ್‌ಆ್ಯಪ್ ಸಂಖ್ಯೆಯ ಮೂಲಕ ಸಂದೇಶಗಳನ್ನು ಮಾತ್ರ ಸ್ವೀಕರಿಸಲಾಗುವುದು. ಕರೆಗಳಿಗೆ ಅವಕಾಶವಿಲ್ಲ ಎಂದೂ ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.