ADVERTISEMENT

ಮಹಿಳೆಯರ ಸುರಕ್ಷತೆಗೆ ಸರ್ಕಾರ ಬದ್ಧ: ಬಿ.ಎಸ್‌. ಯಡಿಯೂರಪ್ಪ

ಪೊಲೀಸ್‌ ಇಲಾಖೆಯ ಮಾನವ ಕಳ್ಳ ಸಾಗಣೆ ನಿಷೇಧ ದಳಗಳಿಗೆ 751 ಬೈಕ್‌ಗಳ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 15:24 IST
Last Updated 12 ನವೆಂಬರ್ 2020, 15:24 IST
ಮಾನವ ಕಳ್ಳ ಸಾಗಣೆ ನಿಷೇಧ ದಳಗಳಿಗೆ ನಿರ್ಭಯ ಯೋಜನೆಯಡಿ 751 ಬೈಕ್‌ಗಳ ಹಸ್ತಾಂತರ
ಮಾನವ ಕಳ್ಳ ಸಾಗಣೆ ನಿಷೇಧ ದಳಗಳಿಗೆ ನಿರ್ಭಯ ಯೋಜನೆಯಡಿ 751 ಬೈಕ್‌ಗಳ ಹಸ್ತಾಂತರ   

ಬೆಂಗಳೂರು: ‘ಮಹಿಳೆಯರ ಸುರಕ್ಷತೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಮಹಿಳೆಯರ ಕುರಿತು ಸಮಾಜದ ದೃಷ್ಟಿಕೋನ ಬದಲಾಗಬೇಕಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಪೊಲೀಸ್‌ ಇಲಾಖೆಯಲ್ಲಿರುವ ಮಾನವ ಕಳ್ಳ ಸಾಗಣೆ ನಿಷೇಧ ದಳಗಳಿಗೆ ನಿರ್ಭಯ ಯೋಜನೆಯಡಿ 751 ಹೀರೊ ಗ್ಲಾಮರ್ಬೈಕ್‌ಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ‘ರಾಜ್ಯ ಮಹಿಳೆಯರಿಗೆ ಅತ್ಯಂತ‌ ಸುರಕ್ಷಿತವಾಗಿದೆ’ ಎಂದರು.

‘ಮಹಿಳೆಯರು ನಿರ್ಭೀತಿಯಿಂದ ಇರುವ ವಾತಾವರಣ ನಿರ್ಮಿಸಲು, ಮುಕ್ತ ಓಡಾಟ, ಸುರಕ್ಷತೆಗೆ ಕೇಂದ್ರ ಸರ್ಕಾರ ಸ್ಥಾಪಿಸಿದ ನಿರ್ಭಯ ಯೋಜನೆಯಡಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಈಗಾಗಲೇ ತೆಗೆದುಕೊಂಡಿದೆ. ರಾಜ್ಯದ 700 ಪೊಲೀಸ್‌ ಠಾಣೆಗಳಲ್ಲಿ ಸಹಾಯವಾಣಿ ಆರಂಭಿಸಲು ಕೇಂದ್ರ ಸರ್ಕಾರ ₹ 7 ಕೋಟಿ ನೀಡಿದೆ’ ಎಂದೂ ಹೇಳಿದರು.

ADVERTISEMENT

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.