ADVERTISEMENT

ಮಹಾರಾಣಿ ವಿ.ವಿಗೆ ಗೋವಿಂದಪ್ಪ ಪ್ರಭಾರ ಕುಲಪತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 16:17 IST
Last Updated 17 ಅಕ್ಟೋಬರ್ 2025, 16:17 IST
   

ಬೆಂಗಳೂರು: ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ವಾಣಿಜ್ಯ ಶಾಲೆಯ ನಿರ್ದೇಶಕ ಡಿ.ಗೋವಿಂದಪ್ಪ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಆದೇಶ ಹೊರಡಿಸಿದ್ದಾರೆ.

ಕುಲಪತಿಯಾಗಿದ್ದ ಎಲ್‌.ಗೋಮತಿದೇವಿ ಅವರ ಅವಧಿ 2024ನೇ ನವೆಂಬರ್‌ನಲ್ಲಿ ಮುಕ್ತಾಯವಾಗಿತ್ತು. ನೂತನ ಕುಲಪತಿಯ ನೇಮಕವಾಗದ ಕಾರಣ ಅಂದಿನಿಂದಲೂ ಪ್ರಭಾರ ಕುಲಪತಿಗಳೇ ಆಡಳಿತ ನಡೆಸುತ್ತಾ ಬಂದಿದ್ದಾರೆ. ಉಷಾದೇವಿ, ಮೀರಾ ಬಿ.ಕೆ, ಟಿ.ಎಂ.ಮಂಜುನಾಥ್‌ ಅವರು ಇದುವರೆಗೂ ಪ್ರಭಾರ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಂಜುನಾಥ್‌ ಅವರ ಅವಧಿ ಅ.16ಕ್ಕೆ ಕೊನೆಗೊಂಡ ಕಾರಣ ಗೋವಿಂದಪ್ಪ ಅವರಿಗೆ ಜವಾಬ್ದಾರಿ ನೀಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT