ADVERTISEMENT

ಸಂಘಸಂಸ್ಥೆಗಳಿಗೆ ನೀಡಿದ್ದ ಸರ್ಕಾರದ ಜಮೀನು ಹಿಂಪಡೆದು ಮಾರಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 18:21 IST
Last Updated 26 ಮೇ 2020, 18:21 IST
   

ಬೆಂಗಳೂರು: ನಗರದಲ್ಲಿ ಈ ಹಿಂದೆ ಕಂದಾಯ ಇಲಾಖೆಗೆ ಸೇರಿದ ಜಮೀನನ್ನು ಕಡಿಮೆ ಬೆಲೆಗೆ ಕೆಲವು ಸಂಘಸಂಸ್ಥೆಗಳಿಗೆ ಗುತ್ತಿಗೆ ನೀಡಿದ್ದು, ಅವುಗಳನ್ನು ಈಗಿನ ಮಾರುಕಟ್ಟೆಗೆ ಬೆಲೆಗೆ ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಆದರೆ, ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಹಿಂದೆ ಕೆಲವು ಸಂಘ ಸಂಸ್ಥೆಗಳು, ಕ್ಲಬ್‌ಗಳು, ಹೋಟೆಲ್‌ಗಳಿಗೆ ಕಂದಾಯ ಇಲಾಖೆಯ ಜಮೀನನ್ನು ಕೆಲವೇ ರುಪಾಯಿಗಳಿಗೆ ಗುತ್ತಿಗೆ ನೀಡಲಾಗಿತ್ತು. ಅದರಿಂದ ಸರ್ಕಾರಕ್ಕೆ ಆದಾಯವೂ ಬರುತ್ತಿಲ್ಲ. ಭೂಮಿಯನ್ನು ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್ಥಿಕವಾಗಿ ಸಂಕಷ್ಟದ ಈ ಸಂದರ್ಭದಲ್ಲಿ ಜಮೀನು ಮಾರಿದರೆ ಆದಾಯ ಸಿಗುತ್ತದೆ ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.

ADVERTISEMENT

ಕೆಲವು ಪ್ರಮುಖ ಸಂಸ್ಥೆಗಳು, ಕ್ಲಬ್‌ಗಳು ಮತ್ತು ಹೋಟೆಲ್‌ಗಳು ಭಾರಿ ಲಾಭವನ್ನು ಮಾಡುತ್ತಿವೆ. ಸರ್ಕಾರಕ್ಕೆ ಇವುಗಳಿಂದ ಯಾವುದೇ ಆದಾಯವಿಲ್ಲ. ಈಗಿನ ಮಾರುಕಟ್ಟೆ ಬೆಲೆಗೆ ಮಾರಿದರೆ ಸಾವಿರಾರು ಕೋಟಿ ಆದಾಯ ಬರುತ್ತದೆ ಎಂಬುದು ಚರ್ಚೆಯಲ್ಲಿ ಕೇಳಿ ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.