ADVERTISEMENT

ಸೋಂಪುರ ಗ್ರಾ.ಪಂಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:20 IST
Last Updated 4 ಅಕ್ಟೋಬರ್ 2019, 20:20 IST
ನೂತನ ಅಧ್ಯಕ್ಷೆ ಲಕ್ಷ್ಮೀದೇವಿ ಅವರನ್ನು ಅಭಿನಂದಿಸಲಾಯಿತು. ಪಿಡಿಒ ದಿನೇಶ್, ಚುನಾವಣಾಧಿಕಾರಿ ಮಂಜುನಾಥ್ ಇದ್ದಾರೆ
ನೂತನ ಅಧ್ಯಕ್ಷೆ ಲಕ್ಷ್ಮೀದೇವಿ ಅವರನ್ನು ಅಭಿನಂದಿಸಲಾಯಿತು. ಪಿಡಿಒ ದಿನೇಶ್, ಚುನಾವಣಾಧಿಕಾರಿ ಮಂಜುನಾಥ್ ಇದ್ದಾರೆ   

ದಾಬಸ್ ಪೇಟೆ: ಸೋಂಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಭಾರತೀಪುರ ಸದಸ್ಯೆ ಲಕ್ಷ್ಮೀದೇವಿ ಆಂಜಿನ ಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

25 ಸದಸ್ಯರನ್ನು ಹೊಂದಿರುವ ಪಂಚಾಯಿತಿಯ ಈ ಹಿಂದಿನ ಅಧ್ಯಕ್ಷರಾಗಿದ್ದ ವೆಂಕಟಲಕ್ಷ್ಮಮ್ಮ ವಿರುದ್ಧ 22 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು.

ನೂತನ ಅಧ್ಯಕ್ಷರ ಆಯ್ಕೆಗೆ ಸರ್ಕಾರ ಶುಕ್ರವಾರ ಸಮಯ ನಿಗದಿಗೊಳಿಸಿತ್ತು. ಅವಿಶ್ವಾಸದ ಪರ ಮತ ಚಲಾಯಿಸಿದ್ದ 22 ಸದಸ್ಯರು ಹಾಜರಿದ್ದು, ಲಕ್ಷ್ಮೀದೇವಿ ಆಂಜಿನ ಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.