ADVERTISEMENT

ಯುಪಿಎಸ್‌ಸಿ: ಗ್ರೇಸ್‌ ಸಂಸ್ಥೆಯ 17 ಅಭ್ಯರ್ಥಿಗಳು ಆಯ್ಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 16:30 IST
Last Updated 27 ಏಪ್ರಿಲ್ 2025, 16:30 IST
ಯುಪಿಎಸ್‌ಸಿ
ಯುಪಿಎಸ್‌ಸಿ   

ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗದ 2024ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ (ಯುಪಿಎಸ್‌ಸಿ) ಚಂದ್ರಾ ಲೇಔಟ್‌ನಲ್ಲಿರುವ ಗ್ರೇಸ್‌ ಐಎಎಸ್‌ ಸಂಸ್ಥೆಯಲ್ಲಿ ತರಬೇತಿ ಪಡೆದ 17 ಅಭ್ಯರ್ಥಿಗಳು ರ್‍ಯಾಂಕ್‌ ಪಡೆದು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.

ರ‍್ಯಾಂಕ್ ವಿವರ: ಶಿವಸಿಂಗ್‌ (73), ತೇಜಸ್ವಿ ದೇಶಪಾಂಡೆ (99), ಅನುಪ್ರಿಯಾ ಸಕ್ಯಾ (120), ರಾಹುಲ್ ಯರಂತೆಲಿ (462), ಗುರ್‌ಸಿಂಬ್ರತ್‌ ಸಿಂಗ್‌ (598), ದಯಾನಂದ ಸಾಗರ್‌ (615), ಸಂಜಯ್‌ ಶಶಿಕಾಂತ್ ಕೌಜಲಗಿ (690), ನಿಖಿಲ್ (724), ವೈಭವ್ ರಾಜ್‌ ಸಿಂಗ್‌ (883), ಹನಮಂತಪ್ಪ ನಂದಿ (910), ಧನ್ಯಾ (982), ಲಕ್ಷ್ಮಿ (997) ರ್‍ಯಾಂಕ್‌ಗಳನ್ನು ಪಡೆದಿದ್ದಾರೆ. ಸಾಧಕ ಅಭ್ಯರ್ಥಿಗಳನ್ನು ಗ್ರೇಸ್‌ ಐಎಎಸ್‌ ತರಬೇತಿ ಸಂಸ್ಥೆಯ ನಿರ್ದೇಶಕ ರವಿಚಂದ್ರ ಹಾಗೂ ಅಭ್ಯರ್ಥಿಗಳಿಗೆ ಸಂದರ್ಶನ ಸಿದ್ಧತೆಯಲ್ಲಿ ಮಾರ್ಗದರ್ಶನ ನೀಡಿದ ಸಂಜು ಸಿಂಗ್‌ ಚೌಹಾಣ್‌ ಅಭಿನಂದಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT