ADVERTISEMENT

Greater Bengaluru Authority: ಇ–ಖಾತಾದಲ್ಲಿ ಯುಪಿಒಆರ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 23:16 IST
Last Updated 3 ಡಿಸೆಂಬರ್ 2025, 23:16 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿನ ಆಸ್ತಿಗಳ ಇ–ಖಾತಾದಲ್ಲಿ ನಗರ ಆಸ್ತಿ ಮಾಲೀಕತ್ವದ ದಾಖಲೆಗಳನ್ನು (ಯುಪಿಒಆರ್‌) ಅಳವಡಿಸುವ ‘ಇಂಟಿಗ್ರೇಟೆಡ್ ಇ-ಖಾತಾ ವ್ಯವಸ್ಥೆ’ಯನ್ನು ಜಾರಿ ಮಾಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ನಗರ ಸಮೀಕ್ಷೆಯಲ್ಲಿ ಯುಪಿಒಆರ್‌ನಲ್ಲಿ ಆಸ್ತಿ ನಕ್ಷೆಗಳು, ಡ್ರೋನ್ ಮೂಲಕ ಪಡೆದುಕೊಂಡ ಓವರ್-ವ್ಯೂ ಚಿತ್ರಗಳನ್ನು ಜಿಬಿಎ ನೀಡುತ್ತಿರುವ ಇ-ಖಾತಾ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ. ನಗರದಲ್ಲಿ ಸುಮಾರು ಎರಡು ವರ್ಷಗಳಿಂದ ಯುಪಿಒಆರ್‌ ಯೋಜನೆಯಡಿ ನಿರ್ವಹಿಸಲಾಗಿರುವ ಕಾರ್ಯವನ್ನು ಇ-ಖಾತಾ ವ್ಯವಸ್ಥೆಗೆ ಸಂಯೋಜಿಸಲು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಕಾರ್ಯ ಶ್ಲಾಘನೀಯ ಎಂದರು.

ADVERTISEMENT

ಇ-ಖಾತಾದಲ್ಲಿರುವ ನಿಖರ ಜಿಪಿಎಸ್‌ ಮಾಹಿತಿ, ಯುಪಿಒಆರ್ ನಕ್ಷೆ ಮತ್ತು ಚಿತ್ರಗಳನ್ನು ಜೋಡಿಸುವುದು ಅತ್ಯಂತ ಪ್ರಮುಖವಾಗಿದೆ. ಈಗಾಗಲೇ ಸುಮಾರು ಒಂದು ಲಕ್ಷ ಸಂಯೋಜಿತ ಇ-ಖಾತಾಗಳನ್ನು ನೀಡಲಾಗಿದ್ದು, ಪ್ರತಿದಿನವೂ ಈ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 9 ಲಕ್ಷ ಅಂತಿಮ ಇ-ಖಾತಾ ನೀಡಲಾಗಿದ್ದು, ಪ್ರತಿದಿನ ಸರಾಸರಿ 2,500 ಇ-ಖಾತಾಗಳನ್ನು ನೀಡಲಾಗುತ್ತಿದೆ. ಕಾಯುವ ಅವಧಿ ಸರಾಸರಿ ಎರಡು ದಿನ ಎಂದು ಮಾಹಿತಿ ನೀಡಿದರು.

ಲಭ್ಯವಿರುವ ಮಾಹಿತಿ
  • ಮಾಲೀಕರ ವಿವರ 

  • ಆಸ್ತಿಯ ಎಲ್ಲ ವಿವರ

  • ಆಸ್ತಿಯ ಚಿತ್ರ 

  • ಮಾಲೀಕರ ಚಿತ್ರ

  • ಆಸ್ತಿಯ ಜಿಪಿಎಸ್‌ ಅಂಕಿಗಳು  

  • ಆಸ್ತಿಯ ಡಿಜಿಟಲ್ ಮ್ಯಾಪ್, ಸ್ಥಳದ ಚಿತ್ರ

  • ಆಸ್ತಿಯ ತೆರಿಗೆ, ಬಳಕೆ ವಿವರ

  • ಬೆಸ್ಕಾಂ ಮೀಟರ್ ಸಂಖ್ಯೆ

  • ಆಸ್ತಿ ಮಾಲೀಕತ್ವ ಪಡೆದಿರುವ ದಾಖಲೆ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.