ADVERTISEMENT

ಜಿಬಿಎ | 20 ವಾರ್ಡ್ ವ್ಯಾಪ್ತಿ, ಹೆಸರು ಬದಲು: ಅಂತಿಮ ಅಧಿಸೂಚನೆಯಲ್ಲಿ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 23:30 IST
Last Updated 2 ಡಿಸೆಂಬರ್ 2025, 23:30 IST
   

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆ ವಾರ್ಡ್‌ಗಳ ಅಂತಿಮ ಅಧಿಸೂಚನೆಯಲ್ಲಿ ಮಾರ್ಪಾಟು ಮಾಡಿರುವ ನಗರಾಭಿವೃದ್ಧಿ ಇಲಾಖೆ, ಕೆಲವು ವಾರ್ಡ್‌ಗಳ ವ್ಯಾಪ್ತಿ ಹಾಗೂ ಹೆಸರನ್ನು ಬದಲಾಯಿಸಿ ಅಧಿಸೂಚನೆ ಹೊರಡಿಸಿದೆ.

ಐದು ನಗರ ಪಾಲಿಕೆಗಳ 369 ವಾರ್ಡ್ ಅಂತಿಮಗೊಳಿಸಿ ನವೆಂಬರ್ 19ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಈ ಬಗ್ಗೆ ಶಾಸಕರು ಹಾಗೂ ಸಾರ್ವಜನಿಕರು ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲಿ ಕೆಲವನ್ನು ಪರಿಗಣಿಸಿ, ಬದಲಾವಣೆ ಮಾಡಿ ಡಿಸೆಂಬರ್ 1ರಂದು ಅಧಿಸೂಚನೆ ಹೊರಡಿಸಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ 15- ಇಂದಿರಾನಗರ, 16- ನ್ಯೂ ತಿಪ್ಪಸಂದ್ರ ವಾರ್ಡ್‌ಗಳ ಗಡಿಯನ್ನು ಮಾರ್ಪಡಿಸಲಾಗಿದೆ.

ADVERTISEMENT

ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಯಲಹಂಕ ವಿಧಾನಸಭೆ ಕ್ಷೇತ್ರದ ವಾರ್ಡ್ 1 ರಾಜಾ ವೆಂಕಟಪ್ಪ ವಾರ್ಡ್ ಅನ್ನು ವಾರ್ಡ್ 3 ಚೌಡೇಶ್ವರಿ ವಾರ್ಡ್, ವಾರ್ಡ್ 2 ಆಕಾಶ್ ವಾರ್ಡ್ ಅನ್ನು ವಾರ್ಡ್ 2 ಏರೋ ಸಿಟಿ ವಾರ್ಡ್ ಹಾಗೂ ವಾರ್ಡ್ 3 ಯಲಹಂಕ ಓಲ್ಡ್ ಟೌನ್ ಅನ್ನು ವಾರ್ಡ್ 1 ರಾಜಾ ವೆಂಕಟಪ್ಪ ವಾರ್ಡ್ ಎಂದು ಬದಲಿಸಲಾಗಿದೆ. ಸರ್ವಜ್ಞ ನಗರ ವಿಧಾನಸಭೆ ಕ್ಷೇತ್ರದ ವಾರ್ಡ್ 31 ಕಲ್ಯ ನಗರ ವಾರ್ಡ್ ಅನ್ನು ವಾರ್ಡ್ 31 ಕಲ್ಯಾಣ ನಗರ ಎಂದು ಬದಲಿಸಲಾಗಿದೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ವಾರ್ಡ್ 3 ಕುಮಾರಸ್ವಾಮಿ ವಾರ್ಡ್ ಅನ್ನು ವಾರ್ಡ್ 3 ಯಾರಬ್ ನಗರ ಎಂದು ಬದಲಿಸಲಾಗಿದೆ. 56- ದೊರೆಸಾನಿಪಾಳ್ಯ, 60- ಬಿಳೇಕಹಳ್ಳಿ, 65- ಗಾರ್ವೆಬಾವಿ ಪಾಳ್ಯ, 66- ಸಿಂಗಸಂದ್ರ ವಾರ್ಡ್‌ಗಳ ಗಡಿಯನ್ನು ಬದಲಾಯಿಸಲಾಗಿದೆ.

ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಕೆ.ಆರ್. ಪುರ ವಿಧಾನಸಭೆ ಕ್ಷೇತ್ರದ ವಾರ್ಡ್ 8- ಟಿ.ಸಿ. ಪಾಳ್ಯವನ್ನು ಆನಂದಪುರ, ವಾರ್ಡ್ 10- ಮೇಡಹಳ್ಳಿಯನ್ನು ಬಸವನಪುರ, ವಾರ್ಡ್ 11- ಬಸವನಪುರವನ್ನು ಕೃಷ್ಣನಗರ, ವಾರ್ಡ್ 12- ಚಿಕ್ಕ ದೇವಸಂದ್ರವನ್ನು ದೇವಸಂದ್ರ, ವಾರ್ಡ್ 13- ದೇವಸಂದ್ರವನ್ನು ರಾಜರಾಜೇಶ್ವರಿ ದೇವಸ್ಥಾನ ವಾರ್ಡ್ ಹಾಗೂ ಮಹದೇವಪುರ ವಿಧಾನಸಭೆ ಕ್ಷೇತ್ರದ ವಾರ್ಡ್ 49- ಶಿವನಸಮುದ್ರ ವಾರ್ಡ್ ಅನ್ನು ದೊಡ್ಡ ಕನ್ನೆಲ್ಲಿ ವಾರ್ಡ್ ಆಗಿ ಹೆಸರಿಸಲಾಗಿದೆ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಯಶವಂತಪುರ ವಿಧಾನಸಭೆ ಕ್ಷೇತ್ರದ ವಾರ್ಡ್ 19- ಕೆಂಗೇರಿಯನ್ನು ಶಿವನಪಾಳ್ಯ, ವಾರ್ಡ್ 20- ಹೆಮ್ಮಿಗೆಪುರವನ್ನು ಕೆಂಗೇರಿ ಕೋಟೆ ವಾರ್ಡ್ ಹಾಗೂ ವಾರ್ಡ್ 21- ಮಲ್ಲಸಂದ್ರವನ್ನು ಕೆಂಗೇರಿಯಾಗಿ ಹೆಸರು ಬದಲಿಸಿ ಅಧಿಸೂಚಿಸಲಾಗಿದೆ.

  • ಬೆಂಗಳೂರು ಕೇಂದ್ರ ನಗರ ಪಾಲಿಕೆ: 63 ವಾರ್ಡ್‌
    ವಿಧಾನಸಭೆ ಕ್ಷೇತ್ರ: ಚಾಮರಾಜಪೇಟೆ– 10 ವಾರ್ಡ್‌, ಚಿಕ್ಕಪೇಟೆ– 12 ವಾರ್ಡ್‌, ಸಿ.ವಿ. ರಾಮನ್‌ ನಗರ– 13 ವಾರ್ಡ್‌, ಗಾಂಧಿನಗರ– 10 ವಾರ್ಡ್‌, ಶಾಂತಿನಗರ– 10 ವಾರ್ಡ್‌, ಶಿವಾಜಿನಗರ– 8 ವಾರ್ಡ್‌.

  • ಬೆಂಗಳೂರು ಉತ್ತರ ನಗರ ಪಾಲಿಕೆ:72 ವಾರ್ಡ್‌
    ವಿಧಾನಸಭೆ ಕ್ಷೇತ್ರ: ದಾಸರಹಳ್ಳಿ– 8 ವಾರ್ಡ್‌, ಪುಲಕೇಶಿನಗರ– 11 ವಾರ್ಡ್‌, ಬ್ಯಾಟರಾಯನಪುರ– 7 ವಾರ್ಡ್‌, ಯಲಹಂಕ– 14 ವಾರ್ಡ್‌, ರಾಜರಾಜೇಶ್ವರಿನಗರ– 5 ವಾರ್ಡ್‌, ಸರ್ವಜ್ಞನಗರ– 16 ವಾರ್ಡ್‌; ಹೆಬ್ಬಾಳ– 11 ವಾರ್ಡ್‌.

  • ಬೆಂಗಳೂರು ದಕ್ಷಿಣ ನಗರ ಪಾಲಿಕೆ: 72 ವಾರ್ಡ್‌‌
    ವಿಧಾನ ಸಭೆ ಕ್ಷೇತ್ರ: ಆನೇಕಲ್‌– 1 ವಾರ್ಡ್‌, ಜಯನಗರ– 10 ವಾರ್ಡ್‌, ಪದ್ಮನಾಭನಗರ– 6 ವಾರ್ಡ್‌, ಬಿಟಿಎಂ ಲೇಔಟ್‌– 14 ವಾರ್ಡ್, ಬೆಂಗಳೂರು ದಕ್ಷಿಣ– 19 ವಾರ್ಡ್‌, ಬೊಮ್ಮನಹಳ್ಳಿ– 20 ವಾರ್ಡ್‌, ಮಹದೇವಪುರ– 1 ವಾರ್ಡ್‌, ಯಶವಂತಪುರ– 1 ವಾರ್ಡ್‌.

  • ಬೆಂಗಳೂರು ಪೂರ್ವ ನಗರ ಪಾಲಿಕೆ: 50 ವಾರ್ಡ್‌
    ವಿಧಾನಸಭೆ ಕ್ಷೇತ್ರ: ಕೆ.ಆರ್‌ ಪುರ– 27 ವಾರ್ಡ್‌, ಮಹದೇವಪುರ– 23 ವಾರ್ಡ್.

  • ಬೆಂಗಳೂರು ಪಶ್ಚಿಮ ನಗರ ಪಾಲಿಕೆ: 112 ವಾರ್ಡ್‌
    ವಿಧಾನಸಭೆ ಕ್ಷೇತ್ರ: ಗೋವಿಂದರಾಜನಗರ– 13 ವಾರ್ಡ್‌, ದಾಸರಹಳ್ಳಿ– 10 ವಾರ್ಡ್‌, ಪದ್ಮನಾಭನಗರ– 8 ವಾರ್ಡ್, ಬಸವನಗುಡಿ–10 ವಾರ್ಡ್, ಮಲ್ಲೇಶ್ವರ– 10 ವಾರ್ಡ್, ಮಹಾಲಕ್ಷ್ಮಿ ಲೇಔಟ್‌– 12 ವಾರ್ಡ್, ಯಶವಂಪುರ– 11 ವಾರ್ಡ್, ರಾಜರಾಜೇಶ್ವರಿನಗರ– 14 ವಾರ್ಡ್, ರಾಜಾಜಿನಗರ– 11 ವಾರ್ಡ್‌, ವಿಜಯನಗರ– 13 ವಾರ್ಡ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.