ADVERTISEMENT

ಮಕ್ಕಳಿಗಾಗಿ ಒಳಾಂಗಣ ಕ್ರೀಡಾಂಗಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 19:45 IST
Last Updated 14 ಏಪ್ರಿಲ್ 2019, 19:45 IST
ಟೈಮ್‌ಝೋನ್‌
ಟೈಮ್‌ಝೋನ್‌   

ನಗರದ ಮಕ್ಕಳು ಬೇಸಿಗೆಯಲ್ಲೂ ಕ್ರೀಡಾಂಗಣ ಹಡುಕಿಕೊಂಡು ಆಡಲು ಹೋಗುವ ಸ್ಥಿತಿ ಇದೆ. ವಾಹನಗಳ ದಟ್ಟಣೆ ಇದ್ದರೂ ಮನೆ ಮುಂದಿನ ರಸ್ತೆಗಳಲ್ಲಿ ಮಕ್ಕಳು ಆಡಬೇಕಾಗಿದೆ.

ಆದರೆ ಚಿಕ್ಕ ಮಕ್ಕಳು ಬಿಸಿಲಿಗೆ ಹೋಗದೆ ಒಳಾಂಗಣದಲ್ಲಿ ಆಡುವ ವ್ಯವಸ್ಥೆ ಇರುವುದು ತೀರಾ ಕಡಿಮೆ. ಇದಕ್ಕಾಗಿ ಆಟ,ಪಾಠಗಳೆರಡಕ್ಕೂ ನೆರವಾಗುವಂತೆ ನಗರದಲ್ಲಿ ಟೈಮ್‌ಝೋನ್‌ ಪ್ಲೇ ಆ್ಯಂಡ್‌ ಲರ್ನ್‌ ಇಂಡೋರ್ ಆ್ಯಕ್ಟಿವಿಟಿ ಮೈದಾನವನ್ನು ಆರಂಭಿಸಲಾಗಿದೆ.

ಇಲ್ಲಿ ಮಕ್ಕಳು ಮೂರು ಹಂತಗಳಲ್ಲಿ ಆಟ ಆಡಬಹುದು. ದೈನಂದಿನ ವ್ಯಾಯಾಮಗಳನ್ನೂ ಮಾಡಬಹುದು. ಜೊತೆಗೆ ಮೋಜು, ಮಸ್ತಿಯನ್ನೂ ಮಾಡಬಹುದು.

ADVERTISEMENT

ದಿ ಎಂಟರ್‌ಟೈನ್‌ಮೆಂಟ್ ಆ್ಯಂಡ್‌ ಎಜುಕೇಷನ್‌ ಗ್ರೂಪ್‌ (ಟಿಇಇಇಜಿ) ಇದನ್ನು ಆರಂಭಿಸಿದೆ. ಆಸ್ಟ್ರೇಲಿಯಾ ಮೂಲದ ಸಂಸ್ಥೆಯು ಮೊದಲ ಒಳಾಂಗಣ ಕ್ರೀಡಾಂಗಣವನ್ನು ಫೋರಂ ಶಾಂತಿನಿಕೇತನ್‌ ಮಾಲ್‌, ವೈಟ್‌ಫೀಲ್ಡ್‌ನಲ್ಲಿ ಆರಂಭಿಸಿದೆ.

ಜಾರುಬಂಡೆ, ಟ್ರ್ಯಾಂಪೋಲಿನ್‌, ರೈನ್‌ಬೊ ನೆಟ್‌, ಬಾಲ್‌ ಪೂಲ್‌, ಅಂಬೆಗಾಲಿನಲ್ಲಿ ಮಕ್ಕಳು ಹೋಗಬಹುದಾದ ಟಾಟ್ಲೊರೋನ್‌ ಕೂಡ ಇಲ್ಲಿದೆ. ಪಾರ್ಟಿ ಹಾಗೂ ಇತರೆ ಕಾರ್ಯಕ್ರಮಗಳಿಗಾಗಿ ಪ್ರತ್ಯೇಕ ಕೋಣೆ ವ್ಯವಸ್ಥೆ ಕೂಡ ಇಲ್ಲಿದೆ.

‘ವ್ಯಾಯಾಮ ಮಕ್ಕಳಿಗೆ ತುಂಬಾ ಮುಖ್ಯ. ಹಳ್ಳಿಗಳಲ್ಲಿ ಅವರಿಗೆ ಅದು ನೈಸರ್ಗಿಕವಾಗಿ ಸಿಗುತ್ತದೆ. ಆದರೆ ನಗರ ಪ್ರದೇಶದಲ್ಲಿ ಅನಿವಾರ್ಯವಾಗಿ ಆಟಕ್ಕಾಗಿ ಜಾಗ ಹುಡುಕಬೇಕಿದೆ. ಈ ಟೈಮ್‌ಝೋನ್‌ನಲ್ಲಿ ಮಕ್ಕಳ ಆಟ, ಪಾಠ ಎರಡಕ್ಕೂ ನೆರವಾಗುವಂತಹ ಅನುಕೂಲಗಳಿವೆ’ ಎಂದು ಟೈಮ್‌ಝೋನ್‌ ಇಂಡಿಯಾ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಅಬ್ಬಾಸ್ ಹೇಳಿದರು.

ಟೈಮ್‌ಝೋನ್‌ ಪ್ಲೇನಲ್ಲಿ ಎಲ್ಲಾ ಉಪಕರಣಗಳು ಮತ್ತು ಸೌಲಭ್ಯಗಳು ಅಂತರರಾಷ್ಟ್ರೀಯ ಸುರಕ್ಷತಾ ಮಾನ್ಯತೆ ಹಾಗೂ ಪತ್ರಗಳನ್ನು ಹೊಂದಿದೆ. ಸುರಕ್ಷತೆಗೆ ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭದ್ರತೆಗಾಗಿ ಕ್ಯಾಮೆರಾಗಳು ಇವೆ. ಮಕ್ಕಳನ್ನು ಆಟ ಆಡಿಸಲಾಗುತ್ತದೆ. ಹಾಗೂ ಅವರನ್ನು ಪೋಷಕರೊಂದಿಗೆ ಮಾತ್ರ ಆಚೆ ಕಳಿಸುವ ವ್ಯವಸ್ಥೆ ಇದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.