ADVERTISEMENT

‘ಸಿನಿಮಾ ನಿರ್ಮಾಣಕ್ಕೆ ಜಿಎಸ್‌ಟಿ ಮಾರಕ’

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 20:30 IST
Last Updated 27 ಫೆಬ್ರುವರಿ 2020, 20:30 IST

ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಮೂಲದಲ್ಲೇ ತೆರಿಗೆ ಕಡಿತವು (ಟಿಡಿಎಸ್‌) ಸಿನಿಮಾ ನಿರ್ಮಾಣವನ್ನು ಕಷ್ಟಕರವಾಗಿಸಿವೆ’ ಎಂದು ಹಿರಿಯ ನಿರ್ಮಾಪಕ ಕೆ.ಸಿ.ಎನ್. ಚಂದ್ರಶೇಖರ್‌ ಅವರು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಿರ್ದೇಶಕರ ಸಂಘ ಆಯೋಜಿಸಿದ್ದ ‘ಸಿನಿಮಾ ನಿರ್ಮಾಣ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಟನಿಗೆ ಒಂದಷ್ಟು ಮುಂಗಡ ಹಣನೀಡಿದೆವು ಎಂದಿಟ್ಟುಕೊಳ್ಳಿ. ಶೇ 18ರಷ್ಟು ಜಿಎಸ್‌ಟಿ ಕಟ್ಟಬೇಕು. ಸಿನಿಮಾ ತೆರೆಕಾಣುವ ಮುನ್ನ ಏನೇ ಹಣ ವ್ಯಯಿಸಿದರೂ ಜಿಎಸ್‌ಟಿ ಕಟ್ಟಲೇಬೇಕು. ಕೊನೆಗೆ ಸಿನಿಮಾ ಹೆಚ್ಚು ದಿನ ಓಡಲಿಲ್ಲ ಎಂದಾದರೆ ನಮಗೆ ಹೇಗಿದ್ದರೂ ನಷ್ಟ. ಜಿಎಸ್‌ಟಿ ಹೊರೆ ಬೇರೆ. ಇದು ನಮಗೆಲ್ಲ ಮಾರಕವಾಗಿದೆ’ ಎಂದು ವಿವರಿಸಿದರು.

ADVERTISEMENT

‘ಜಿಎಸ್‌ಟಿ ಹೇರಿಕೆ ವಿರೋಧಿಸಿ ನಮ್ಮವರು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಏನು ಫಲ ಸಿಗಲಿದೆ ಕಾದುನೋಡಬೇಕಷ್ಟೇ’ ಎಂದರು.

‘ವರ್ಷಕ್ಕೆ 400 ಸಿನಿಮಾ ನಿರ್ಮಿಸುತ್ತಿದ್ದೇವೆ. ಶುಕ್ರವಾರ ತೆರೆಕಂಡ ಸಿನಿಮಾ ಶನಿವಾರ ನೋಡಲು ಸಿಗುವುದಿಲ್ಲ. ಥೀಯೇಟರ್‌ಗಳಲ್ಲಿ ಹಣ ಸಂಗ್ರಹ ಕಡಿಮೆಆಗಿದೆ. ಒಂದು ಕಡೆ ನಿರ್ಮಾಣವಾಗುತ್ತಿ
ರುವ ಸಿನಿಮಾ ಸಂಖ್ಯೆ ಹೆಚ್ಚಿದೆ. ಇತ್ತಸಿನಿಮಾ ನಿರ್ಮಾಣ ವೆಚ್ಚವೂ ಹೆಚ್ಚಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.