ADVERTISEMENT

ಶಿಕ್ಷಣದ ಮಾನ ಉಳಿದಿರುವುದು ಅತಿಥಿ ಉಪನ್ಯಾಸಕರಿಂದ: ಅಲ್ಲಮಪ್ರಭು ಬೆಟ್ಟದೂರು

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 21:18 IST
Last Updated 28 ಜೂನ್ 2020, 21:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಶಿಕ್ಷಣ ವ್ಯವಸ್ಥೆಯ ಮಾನ ಉಳಿದಿದ್ದರೆಅದು ಅತಿಥಿ ಉಪನ್ಯಾಸಕರಿಂದ’ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಪ್ರತಿಪಾದಿಸಿದರು.

ಅತಿಥಿ ಶಿಕ್ಷಕರು, ಉಪನ್ಯಾಸಕರು ಮತ್ತು ಶಾಲಾ ಕಾಲೇಜುಗಳ ಶಿಕ್ಷಕ ಸಮುದಾಯದ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ಭಾನುವಾರ ಆಯೋಜಿಸಿದ್ದ ಫೇಸ್‌ಬುಕ್ಲೈವ್ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೂಡಲೇ ಅವರ ಅರ್ಹತೆ ಮತ್ತು ಅನುಭವ ಆಧರಿಸಿಪೂರ್ಣಾವಧಿ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಪ್ಯಾಕೇಜ್‌ ಘೋಷಣೆ ಮಾಡಬೇಕು. ತಾಲ್ಲೂಕು ಕಚೇರಿಯ ಪತ್ರ ವ್ಯವಹಾರಗಳನ್ನು ಸರಳವಾಗಿ ನಿರ್ವಹಿಸಲು ಪ್ರತಿ ತಾಲ್ಲೂಕಿಗೆ ಒಬ್ಬ ಭಾಷಾ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರುವ ಅನಿವಾರ್ಯತೆ ಇದೆ. ಸಂಘಟಿತರಾಗಿ ಹೋರಾಟಕ್ಕೆ ಉಪನ್ಯಾಸಕರು ಸಿದ್ಧವಾಗಬೇಕು. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಶಾಲಾ–ಕಾಲೇಜುಗಳಎದುರೇಧರಣಿ ಕೂರಬೇಕಾಗುತ್ತದೆ’ ಎಂದು ತಿಳಿಸಿದರು.

ಲೇಖಕ ಪ್ರೊ. ಎ.ನಾರಾಯಣ ಮಾತನಾಡಿ, ‘ಶಿಕ್ಷಣದ ವಿಷಯದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳಬಾರದು. ಅತಿಥಿ ಉಪನ್ಯಾಸಕರು ಎಂಬ ವಿಷಯವನ್ನೇ ಕೊನೆಗಾಣಿಸಿ ಪೂರ್ಣಾವಧಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕಾನೂನಿನ ವಿಷಯವನ್ನು ಸರ್ಕಾರ ಮಾತನಾಡುತ್ತಿದೆ. ನಾವು ನ್ಯಾಯದ ಬಗ್ಗೆ ಮಾತನಾಡುತ್ತಿದ್ದೇವೆ. ನ್ಯಾಯಬದ್ಧವಾಗಿಯೇ ಹೋರಾಡಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಅಗತ್ಯವಿದೆ’ ಎಂದು ಎಐಎಸ್‌ಇಸಿ ಮುಖಂಡ ಭರತ್‌ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.