ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ನ ಠೇವಣಿದಾರರ ಹಣ ದುರ್ಬಳಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ 10 ಆರೋಪಿಗಳನ್ನು ಪುನಃ ಎರಡು ದಿನ ಸಿಐಡಿ ಕಸ್ಟಡಿಗೆ ನೀಡಲಾಗಿದೆ.
ಇತ್ತೀಚೆಗೆ ಬಂಧಿಸಲಾಗಿದ್ದ ಶ್ರೀನಿವಾಸ್, ರಾಮಕೃಷ್ಣ, ಟಿ. ಕುಮರೇಶ್ ಬಾಬು, ಶ್ರೀಹರಿಕೃಷ್ಣ, ಎಸ್.ಪಿ. ಶ್ರೀಶಾ, ರಮೇಶ್, ಎನ್. ಲೋಕೇಶ್, ಜಿ. ಪ್ರಸನ್ನ ಕುಮಾರ್, ಎನ್. ವಿಜಯಸಿಂಹ ಹಾಗೂ ಬಿ.ಎನ್.ವೆಂಕಟೇಶ್ ಸೇರಿ 10 ಮಂದಿಯನ್ನು ವಿಚಾರಣೆ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.