ADVERTISEMENT

ಇದೇ 14ಕ್ಕೆ ‘ಹಕ್ಕಿ ಕಥೆ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 20:29 IST
Last Updated 10 ನವೆಂಬರ್ 2021, 20:29 IST
‘ಹಕ್ಕಿ ಕಥೆ’ ನಾಟಕದ ದೃಶ್ಯ
‘ಹಕ್ಕಿ ಕಥೆ’ ನಾಟಕದ ದೃಶ್ಯ   

ಬೆಂಗಳೂರು: ಶಿವಮೊಗ್ಗದ ರಂಗಾಯಣವು ಇದೇ 14ರಂದು ಮಧ್ಯಾಹ್ನ 3.30 ಹಾಗೂ ಸಂಜೆ 7 ಗಂಟೆಗೆ ರಂಗ
ಶಂಕರದಲ್ಲಿ ‘ಹಕ್ಕಿ ಕಥೆ’ ಬೊಂಬೆ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದೆ.

‘ಕವಿ ನಾ. ಡಿಸೋಜಾ ಅವರ ‘ಹಕ್ಕಿಗೊಂದು ಗೂಡು ಕೊಡಿ’ ಕಾದಂಬರಿಯನ್ನು ಈ ನಾಟಕ ಆಧರಿಸಿದೆ. ಎಸ್. ಮಾಲತಿ ಅವರು ಕಾದಂಬರಿಯನ್ನು ನಾಟಕಕ್ಕೆ ರೂಪಾಂತರಿಸಿದ್ದಾರೆ. ಪ್ರಕೃತಿಯ ಇತರ ಜೀವಗಳ ಜೀವನದ ಮೇಲೆ ಮನುಷ್ಯನ ಹಸ್ತಕ್ಷೇಪ, ಪ್ರಕೃತಿ ಕೊಡುವ ತಿರುಗೇಟನ್ನು ಈ ನಾಟಕ ಮನಗಾಣಿಸುತ್ತದೆ’ ಎಂದು ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ತಿಳಿಸಿದ್ದಾರೆ.

‘ಜಪಾನಿನ ಪ್ರಸಿದ್ಧ ಬುನಾರುಕ ಶೈಲಿಯ ಬೊಂಬೆಯಾಟದ ಕಲೆಯನ್ನು ಈ ನಾಟಕದಲ್ಲಿ ಅಳವಡಿಸಿರುವುದು ವಿಶೇಷ. ಗಣೇಶ್ ಮಂದಾರ್ತಿ ಮತ್ತು ಶ್ರವಣ್ ಹೆಗ್ಗೋಡು ಅವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಪ್ರತಿ ಪ್ರದರ್ಶನಕ್ಕೆ ₹ 200 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ರಂಗಶಂಕರದ ಕೌಂಟರ್ ಹಾಗೂbookmyshow.comನಲ್ಲಿ ಟಿಕೆಟ್‌ಗಳನ್ನು ಪಡೆಯಬಹುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.