ADVERTISEMENT

ಯಂತ್ರಕ್ಕೆ ಸಿಲುಕಿದ ಕೈ: ಮರುಜೋಡಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 21:45 IST
Last Updated 21 ಫೆಬ್ರುವರಿ 2023, 21:45 IST
   

ಬೆಂಗಳೂರು: 51 ವರ್ಷದ ವ್ಯಕ್ತಿ ಯೊಬ್ಬರ ತುಂಡಾಗಿದ್ದ ಕೈಮಣಿಕಟ್ಟನ್ನು ಮರು ಜೋಡಿಸುವಲ್ಲಿ ಇಲ್ಲಿನ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಕಾರ್ಖಾನೆಯ ವ್ಯವಸ್ಥಾಪಕ ರಾಗಿದ್ದ ವ್ಯಕ್ತಿ, ಹೊಸ ಯಂತ್ರ ಪರೀಕ್ಷಿಸುವ ವೇಳೆ ಅರಿವಿಲ್ಲದೆಯೇ ಕೈಯನ್ನು ಯಂತ್ರದ ಒಳಗಡೆ ಹಾಕಿ ದ್ದರು. ಇದರಿಂದ ಕೈಮಣಿಕಟ್ಟು ಬೇರ್ಪಟ್ಟಿತ್ತು. ಕೂಡಲೇ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ದು, ಶಸ್ತ್ರಚಿಕಿತ್ಸೆಯ ಮೂಲಕ ಮಣಿಕಟ್ಟನ್ನು ಮರುಜೋಡಿಸಲಾಗಿದೆ.

‘ತುಂಡಾಗಿದ್ದ ಮಣಿಕಟ್ಟನ್ನು ಜೋಪಾನವಾಗಿ ತಂದಿದ್ದರು. ಇದ ರಿಂದ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ, ಮೊದಲಿನಂತೆಯೇ ಮರುಜೋಡಣೆ ಮಾಡಲಾಯಿತು. ಒಂದೆರಡು ತಿಂಗಳ ನಂತರ ಮೊದಲಿನಂತೆಯೇ ಕೈ ಕಾರ್ಯನಿರ್ವಹಿಸಲಿದೆ’ ಎಂದು ಆಸ್ಪತ್ರೆಯ ಡಾ. ಸತ್ಯವಂಶಿ ಕೃಷ್ಣ ತಿಳಿಸಿದರು.

ADVERTISEMENT

‘ತುಂಡಾದ ಅಂಗ ಕೆಲ ಗಂಟೆ ಗಳವರೆಗೂ ಸಕ್ರಿಯವಾಗಿರುತ್ತದೆ. ನಿಗದಿತ ಅವಧಿಯೊಳಗೆ ಅಂಗವನ್ನು ತೇವಾಂಶವಿರುವ ಬಟ್ಟೆಯಲ್ಲಿ ಸುತ್ತಿ, ಜೋಪಾನವಾಗಿ ಆಸ್ಪತ್ರೆಗೆ ತಂದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮರುಜೋಡಣೆ ಮಾಡಬಹುದು. ಕೆಲವರು ತುಂಡಾದ ಅಂಗವನ್ನು ಜೋಪಾನವಾಗಿಡಲು ತಣ್ಣನೆ ನೀರು ಅಥವಾ ಐಸ್‌ ಕ್ಯೂಬ್‌ ಡಬ್ಬದಲ್ಲಿ ಇಡುತ್ತಾರೆ. ಇದು ತಪ್ಪು ವಿಧಾನವಾಗಿದ್ದು, ಹೀಗೆ ಮಾಡುವುದರಿಂದ ಅಂಗದಲ್ಲಿನ ಸ್ನಾಯುಗಳು ಬೇಗ ಸಾಯುವ ಅಪಾಯ ಇರುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.