ADVERTISEMENT

ಪರಿಹಾರ ಪಡೆಯುವ ನಿಯಮ ಸರಳವಾಗಲಿ: ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 0:16 IST
Last Updated 3 ಜೂನ್ 2021, 0:16 IST
ಡಾ.ಎಲ್. ಹನುಮಂತಯ್ಯ
ಡಾ.ಎಲ್. ಹನುಮಂತಯ್ಯ   

ಬೆಂಗಳೂರು: ‘ಕೋವಿಡ್‌ ಪರಿಹಾರ ಪ್ಯಾಕೇಜ್‌ ಅಡಿ ಸರ್ಕಾರವು ಹಲವು ವರ್ಗಗಳಿಗೆ ಪರಿಹಾರ ಘೋಷಿಸಿರುವುದು ಸ್ವಾಗತಾರ್ಹ. ಆದರೆ, ತಂತ್ರಜ್ಞಾನದ ಬಳಕೆ ಗೊತ್ತಿರದವರಿಗೆ ಈ ಪರಿಹಾರ ಪಡೆಯುವುದು ಕಷ್ಟವಾಗುತ್ತಿದೆ. ತಾಂತ್ರಿಕ ಅಂಶಗಳನ್ನು ಮತ್ತು ನಿಯಮಗಳನ್ನು ಸರಳೀಕರಣಗೊಳಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಒತ್ತಾಯಿಸಿದ್ದಾರೆ.

‘ಹಲವು ವರ್ಗಗಳಿಗೆ ನೀಡಿರುವ ಪರಿಹಾರ ಮೊತ್ತವು ಅತ್ಯಲ್ಪವಾಗಿದೆ. ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು’ ಎಂದು ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

’ಸರ್ಕಾರ ಈಗಾಗಲೇ ಘೋಷಿಸಿರುವ ಸಮುದಾಯಗಳನ್ನು ಹೊರತು ಪಡಿಸಿ, ಅಲೆಮಾರಿಗಳು, ಭಿಕ್ಷುಕರು, ವೇಶ್ಯಾವೃತ್ತಿಯಲ್ಲಿರುವವರು, ಹಕ್ಕಿಪಿಕ್ಕಿ, ಬಹುರೂಪಿ, ಕೊರಚ, ಘಂಟಿಚೋರ್‌ ಮುಂತಾದವರಿಗೆ ಪರಿಹಾರದ ಅಗತ್ಯವಿದೆ. ಸರ್ಕಾರ ಇವರಿಗೂ ಪರಿಹಾರ ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.