ADVERTISEMENT

ನಶೆ ಏರಿಸಿಕೊಳ್ಳುವ ಬಾಲಕರು; ದೂರು

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:42 IST
Last Updated 30 ಜುಲೈ 2019, 19:42 IST
ಉದ್ಯಾನದಲ್ಲಿ ಬಿದ್ದಿದ್ದ ವೈಟ್ನರ್ 
ಉದ್ಯಾನದಲ್ಲಿ ಬಿದ್ದಿದ್ದ ವೈಟ್ನರ್    

ಬೆಂಗಳೂರು: ಎಚ್‌ಬಿಆರ್ ಲೇಔಟ್‌ ಬಳಿಯ ಉದ್ಯಾನವೊಂದರಲ್ಲಿ ನಿತ್ಯವೂ ಕೆಲ ಬಾಲಕರು ಡ್ರಗ್ಸ್ ಸೇವಿಸುತ್ತಿದ್ದು, ಆ ಸಂಬಂಧ ಸ್ಥಳೀಯ ನಿವಾಸಿ ವಿಕ್ರಮ್ ಎಂಬುವರು ನಗರ ಪೊಲೀಸರಿಗೆ ಟ್ವಿಟರ್‌ ಮೂಲಕ ದೂರು ನೀಡಿದ್ದಾರೆ.

‘ಎಚ್‌ಬಿಆರ್‌ ಲೇಔಟ್‌ನ 3ನೇ ಹಂತದ 2ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನದಲ್ಲಿ ಕೆಲ ಬಾಲಕರು, ಡ್ರಗ್ಸ್ ಸೇವಿಸುವುದು ಹಾಗೂ ಧೂಮಪಾನ ಮಾಡುವುದು ಮಾಡುತ್ತಿದ್ದಾರೆ. ಉದ್ಯಾನದಲ್ಲೆಲ್ಲ ಡ್ರಗ್ಸ್‌ನ ಕುರುಹುಗಳು ಬಿದ್ದಿವೆ’ ಎಂದು ವಿಕ್ರಮ್ ದೂರಿನಲ್ಲಿ ತಿಳಿಸಿದ್ದಾರೆ.

‘ಉದ್ಯಾನ ಹಾಗೂ ಅದರ ಸುತ್ತಮುತ್ತ ಹೆಚ್ಚಾಗಿ ಪೊಲೀಸರು ಗಸ್ತು ತಿರುಗುತ್ತಿಲ್ಲ. ಹೀಗಾಗಿ, ಬಾಲಕರಿಗೆ ಯಾವುದೇ ಭಯವಿಲ್ಲದಂತಾಗಿದೆ. ಕೂಡಲೇ ಗಸ್ತು ಹೆಚ್ಚಿಸಬೇಕು’ ಎಂದು ಕೋರಿದ್ದಾರೆ.

ADVERTISEMENT

ಪೊಲೀಸ್ ಕಮಿಷನರ್ ಕಚೇರಿ ಅಧಿಕಾರಿ, ‘ನಿಮ್ಮ ದೂರನ್ನು ಬಾಣಸವಾಡಿ ಠಾಣೆಗೆ ವರ್ಗಾಯಿಸಲಾಗಿದ್ದು, ಕ್ರಮಕ್ಕೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.

ಉದ್ಯಾನದಲ್ಲಿ ಪರಿಶೀಲನೆ: ದೂರಿನ ಬಗ್ಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಂತೆ, ಬಾಣಸವಾಡಿ ಪೊಲೀಸರು ಉದ್ಯಾನಕ್ಕೆ ಹೋಗಿ ಪರಿಶೀಲನೆ ನಡೆಸಿದರು. ಡ್ರಗ್ಸ್, ಧೂಮಪಾನದ ಕುರುಹುಗಳು ಪತ್ತೆಯಾದವು.

‘ದುಶ್ಚಟಗಳ ದಾಸರಾಗಿರುವ ಕೆಲ ಬಾಲಕರು, ಉದ್ಯಾನದಲ್ಲಿ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ವೈಟ್ನರ್‌ ಸೇರಿದಂತೆ ಕೆಲ ಮತ್ತು ಬರುವ ಡ್ರಗ್ಸ್ ಸೇವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಆ ಬಾಲಕರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.