ADVERTISEMENT

‘ಪೋಲಿಯೊ ಹನಿ: ಭಯಪಡುವ ಅಗತ್ಯವಿಲ್ಲ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 19:00 IST
Last Updated 4 ಅಕ್ಟೋಬರ್ 2018, 19:00 IST

ಬೆಂಗಳೂರು: ‘ಪೋಲಿಯೊ ಹನಿ ಹಾಕಿಸುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಕರ್ನಾಟಕದಲ್ಲಿ ಮಕ್ಕಳಿಗೆ ಹಾಕಿದ ಹನಿಗಳಲ್ಲಿ ಯಾವುದೇ ತೊಂದರೆ ಕಂಡುಬಂದಿಲ್ಲ’ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಪೋಲಿಯೊ ಲಸಿಕೆ ಹಾಕಿಸಿದ ಮಕ್ಕಳಲ್ಲಿ ಎರಡನೇ ಮಾದರಿಯ ಪೋಲಿಯೊ ಸಮಸ್ಯೆ ಕಂಡುಬಂದಿದೆ ಎಂಬ ಸುದ್ದಿ ರಾಜ್ಯದ ಎಲ್ಲೆಡೆ ಹರಡಿದೆ. ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡಿದ ಕಾರಣ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದೆ.

‘ಸಾರ್ವಜನಿಕರು ಅನಗತ್ಯವಾಗಿ ಭಯಪಡಬೇಕಿಲ್ಲ. ಪರೀಕ್ಷಿಸಿದ ಪೋಲಿಯೊ ಹನಿಗಳನ್ನು ಮಾತ್ರ ರಾಜ್ಯದಲ್ಲಿ ಬಳಸಲಾಗಿದೆ’ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.