ADVERTISEMENT

ಹೆಬ್ಬಾಗಿಲು ಊರಿನ ಇತಿಹಾಸದ ಪ್ರತೀಕ: ಶಾಸಕ ಎಸ್.ಮುನಿರಾಜು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 15:38 IST
Last Updated 25 ಜನವರಿ 2026, 15:38 IST
ಬೆಲ್ಮಾರ್ ಬಡಾವಣೆಯ ಹೆಬ್ಬಾಗಿಲನ್ನು ಶಾಸಕ ಎಸ್. ಮುನಿರಾಜು ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು.
ಬೆಲ್ಮಾರ್ ಬಡಾವಣೆಯ ಹೆಬ್ಬಾಗಿಲನ್ನು ಶಾಸಕ ಎಸ್. ಮುನಿರಾಜು ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು.   

ಪೀಣ್ಯ ದಾಸರಹಳ್ಳಿ: ಹಿಂದೆ ಗ್ರಾಮಗಳು ಇದ್ದಂತಹ ಕಾಲದಲ್ಲಿ ಅಲ್ಲಿನ ಇತಿಹಾಸ, ಗ್ರಾಮ ದೇವತೆ, ವಿಶೇಷ ಆಚಾರ ವಿಚಾರ, ಸಂಸ್ಕೃತಿಯ ಪ್ರತೀಕವಾಗಿ ಇರುತ್ತಿದ್ದ ಹೆಬ್ಬಾಗಿಲು ಈಗಲೂ ಹಲವು ಕಡೆ ಬಳಕೆಯಲ್ಲಿವೆ' ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.

ನೆಲಗದರನಹಳ್ಳಿ ಮುಖ್ಯರಸ್ತೆಯ ಬೆಲ್ಮಾರ್ ಬಡಾವಣೆ ಹೆಬ್ಬಾಗಿಲು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ,' ಒಂದು ಬಡಾವಣೆ ಎಂದರೆ ಅಲ್ಲಿ ಲಕ್ಷಾಂತರ ಮನೆಗಳಿರುತ್ತವೆ. ಅಲ್ಲಿ ಜಾತಿ, ಮತ, ಭೇದ ಭಾವ ವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಐಕ್ಯತೆಯಿಂದ ಸಹಬಾಳ್ವೆ ನಡೆಸಬೇಕು. ಏನೇ ಸಮಸ್ಯೆಗಳಿದ್ದರೂ ಒಗ್ಗಟ್ಟಾಗಿ ಚರ್ಚಿಸಿ ಬಗೆಹರಿಸಿಕೊಳ್ಳುವ ಕೆಲಸ ಮಾಡಬೇಕು' ಎಂದರು.

ADVERTISEMENT

ಇದೇ ವೇಳೆ ಊರ ದೇವರಾದ ಆಂಜನೇಯ ಸ್ವಾಮಿಯನ್ನು ಕಲಾತಂಡಗಳೊಂದಿಗೆ ಮೆರವಣಿಗೆಗಳ ಮೂಲಕ ಗ್ರಾಮಕ್ಕೆ ಕರೆ ತರಲಾಯಿತು. ಭಕ್ತಾದಿಗಳಿಗೆ ಅನ್ನದಾಸೋಹ ಮತ್ತು ಸಿಹಿ ವಿತರಿಸಲಾಯಿತು.

ಬೆಲ್ಮಾರ್ ಬಡಾವಣೆಯಲ್ಲಿ ಶಾಸಕ ಎಸ್. ಮುನಿರಾಜು ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರು ಗೋ ಪೂಜೆ ಮಾಡಿ ಬೆಲ್ಮಾರ್ ಬಡಾವಣೆ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.