ADVERTISEMENT

‘ತೂಬು ಮುಚ್ಚಿದ ಭೂಮಾಲೀಕರು’

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:50 IST
Last Updated 22 ಜುಲೈ 2019, 19:50 IST
ಕೆರೆಯ ತೂಬನ್ನು ಮುಚ್ಚಿರುವುದು
ಕೆರೆಯ ತೂಬನ್ನು ಮುಚ್ಚಿರುವುದು   

ಹೆಸರಘಟ್ಟ: ಗ್ರಾಮದ ಕೆರೆಯ ತಳಭಾಗದಲ್ಲಿದ್ದ ತೂಬನ್ನು ಭೂಮಾಲೀಕರು ಮುಚ್ಚಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಚಿಕ್ಕಬಾಣಾವರ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

‘ಗಾಣಿಗರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಕೆರೆಗೊಂದು ತೂಬು ಇತ್ತು. ತಳಮಟ್ಟದ ನೀರು ಇಲ್ಲಿಂದ ಹರಿದು ಹೋಗುತ್ತಿತ್ತು. ಆದರೆ, ಭೂಮಾಲೀಕರು ಅದನ್ನು ಮುಚ್ಚಿದ್ದಾರೆ. ಆದರೆ, ನಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ರಮ ಕೈಗೊಂಡಿಲ್ಲ’ ಎಂದು ಸದಸ್ಯೆ ಭಾಗ್ಯಮ್ಮ ಕಿಡಿಕಾರಿದರು.

‘10 ವರ್ಷಗಳ ಹಿಂದೆ ಇದೇ ತೂಬಿನಲ್ಲಿ ಬಟ್ಟೆ ತೊಳೆಯುತ್ತಿದ್ದೆವು. ಜನರು ಕುಡಿಯಲು ನೀರನ್ನು ಇಲ್ಲಿಂದಲೇ ತೆಗೆದು ಕೊಂಡು ಹೋಗುತ್ತಿದ್ದರು. ತೂಬು ಇಲ್ಲದೇ ಇರುವುದರಿಂದ ತಳಮಟ್ಟದ ನೀರು ಹೊರಗೆ ಹೋಗದೆ ಕೆರೆ ಕಲುಷಿತಗೊಂಡಿದೆ. ತೂಬು ಮುಚ್ಚಿ
ದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ’ ಎಂದು ಅವರು ಅಧ್ಯಕ್ಷರಲ್ಲಿ ಮನವಿ ಮಾಡಿದರು.

ADVERTISEMENT

‘ವಿಷಯ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತೂಬನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳೋಣ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಕೇಶವಮೂರ್ತಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.