ADVERTISEMENT

ಸತತ ಐದು ಬಾರಿ ಗೆದ್ದ ನಾಲ್ವರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 20:34 IST
Last Updated 3 ಜನವರಿ 2021, 20:34 IST
ಮೂರು ಬಾರಿ ಗೆಲುವು ಕಂಡ ಟಿ.ವೆಂಕಟೇಶ್ ಮೂರ್ತಿ
ಮೂರು ಬಾರಿ ಗೆಲುವು ಕಂಡ ಟಿ.ವೆಂಕಟೇಶ್ ಮೂರ್ತಿ   

ಹೆಸರಘಟ್ಟ: ಹೋಬಳಿಯ ಏಳು ಗ್ರಾಮ ಪಂಚಾಯಿತಿಗಳಲ್ಲಿ ನಾಲ್ವರು ಸತತವಾಗಿ ಐದು ಬಾರಿ ಮತ್ತು ಎಂಟು ಮಂದಿ ಸತತ ಮೂರು ಬಾರಿ ಗೆದ್ದಿದ್ದಾರೆ.

ಹೆಸರಘಟ್ಟ ಗ್ರಾಮದ ಅಶ್ವಥ್ ಬಿ., ಅಂಜನಾದೇವಿ, ಲೋಹಿತಾಶ್ವ, ಶ್ರೀನಿವಾಸಮೂರ್ತಿ ಸತತವಾಗಿ ಐದು ಬಾರಿ ಗೆಲುವು ಸಾಧಿಸಿದ್ದಾರೆ. ಗೋವಿಂದರಾಜು, ಪ್ರಭಾಕರ್, ಎಚ್.ಕೆ.ಪರಿಮಳ, ಸುನೀಲ್ ಕುಮಾರ್ ನಿರಂತರವಾಗಿ ಮೂರು ಬಾರಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಕಸಘಟ್ಟಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎ.ಬಾಲರಾಜು ಹಾಗೂ ಹುರುಳಿಚಿಕ್ಕನಹಳ್ಳಿ ಗ್ರಾಮಪಂಚಾಯಿತಿಯ ತರಬನಹಳ್ಳಿ ಗ್ರಾಮದ ರೂಪಾ, ರಾಜಾನುಕುಂಟೆ ಗ್ರಾಮದ ಆರ್.ಎಚ್.ಹನುಮೇಗೌಡ,ಸೋಲದೇವನಹಳ್ಳಿ ಗ್ರಾಮದ ಟಿ.ವೆಂಕಟೇಶ್ ಮೂರ್ತಿ ಸತತವಾಗಿ ಮೂರು ಬಾರಿ ಜಯಶೀಲರಾಗಿರುವ ಸದಸ್ಯರು.

ADVERTISEMENT

‘ಗ್ರಾಮಸ್ಥರಿಗೆ ಏನೇ ಸಂಕಷ್ಟ ಎದುರಾದರೂ, ಸದಸ್ಯರು ತಕ್ಷಣ ಸ್ಪಂದಿಸಬೇಕು. ಜನ ಮೂಲ ಸೌಲಭ್ಯಗಳನ್ನು ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಸರ್ಕಾರದ ಯೋಜನೆಗಳನ್ನು ಗ್ರಾಮದ ಜನರಿಗೆ ನಿರಂತರವಾಗಿ ತಲುಪಿಸಿದ್ದೇನೆ. ಈ ಕಾರಣಕ್ಕಾಗಿಯೇ ಬೇರೆ ವಾರ್ಡ್‌ಗಳಲ್ಲಿ ಸ್ಪರ್ಧಿಸಿದರೂಗ್ರಾಮಸ್ಥರು ಗೆಲುವು ನೀಡಿದ್ದಾರೆ’ ಎನ್ನುತ್ತಾರೆಮೂರು ಬಾರಿ ಗ್ರಾಮದ ಬೇರೆ ಬೇರೆ ವಾರ್ಡ್‌ಗಳಲ್ಲಿ ಸ್ಪರ್ಧಿಸಿ‌ ವಿಜಯ ಸಾಧಿಸಿರುವ ಸೋಲದೇವನಹಳ್ಳಿ ಗ್ರಾಮದ ಟಿ.ವೆಂಕಟೇಶ್ ಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.