ADVERTISEMENT

ಕೌಶಲ್ಯ ಅಭಿವೃದ್ಧಿ ಕೇಂದ್ರ ಶೀಘ್ರ : ಜಿ.ಎ. ಬಾವಾ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 19:54 IST
Last Updated 24 ಜೂನ್ 2019, 19:54 IST
ಜಿ.ಎ.ಬಾವಾ
ಜಿ.ಎ.ಬಾವಾ   

ಬೆಂಗಳೂರು: ‘ಹಝ್ರತ್ ಹಮೀದ್ ಷಾ ಕಟ್ಟಡ ಸಂಕೀರ್ಣದಲ್ಲಿ ವಕ್ಫ್‌ ಇಲಾಖೆ ಹಾಗೂ ಸರ್ಕಾರದ ನೆರವಿನಿಂದ ಶೀಘ್ರವೇ ಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭಿಸಲಿದ್ದೇವೆ’ ಎಂದು ಆಡಳಿತ ಸಮಿತಿ ಅಧ್ಯಕ್ಷ ಜಿ.ಎ.ಬಾವಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಸಂಕೀರ್ಣದಲ್ಲಿ ಸಭಾಂಗಣ, ವಾಹನ ಪರವಾನಗಿ ವಿತರಣಾ ಕೇಂದ್ರ, ಜಿಮ್‌, ಪಾರ್ಕಿಂಗ್‌ ವ್ಯವಸ್ಥೆಗಳನ್ನು ಒದಗಿಸಲಾಗುವುದು’ ಎಂದರು.

‘ಮೂರು ವರ್ಷಗಳಲ್ಲಿ ಆರ್ಥಿಕ ಶಿಸ್ತು ತಂದ ಫಲವಾಗಿಸಮಿತಿಯ ಖಾತೆಯಲ್ಲಿ ₹3.5 ಕೋಟಿ ಜಮೆಯಾಗಿದೆ. ಮುಸ್ಲಿಂ ಸಮುದಾಯದ ಬಾಲಕಿಯರಿಗೆ ಉಚಿತ ಹಾಸ್ಟೆಲ್‌,ಉದ್ಯೋಗಸ್ಥ ಮಹಿಳೆಯರಿಗಾಗಿ ವಸತಿ ನಿಲಯ, ಐಟಿಐ ಕಾಲೇಜಿನ ಪ್ರಯೋಗಾ ಲಯಕ್ಕೆ ಹಾಗೂ ತರಗತಿ ನಡೆಸಲು ತಲಾ 5 ಕೊಠಡಿಗಳನ್ನು ನಿರ್ಮಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ನಗರ ಆರೋಗ್ಯ ಕೇಂದ್ರ, ಉಚಿತ ಡಯಾಲಿಸಿಸ್‌ ಹಾಗೂ ಡಯಾಗ್ನಾಸಿಸ್ ಕೇಂದ್ರ, ಉಚಿತ ಔಷಧಿ ವಿತರಣಾ ಕೇಂದ್ರಗಳನ್ನು ಸಂಕೀರ್ಣದಲ್ಲಿ ತೆರೆಯಲಾಗಿದೆ. ಮಸೀದಿಯ ಮೊದಲ ಮಹಡಿ ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.