ADVERTISEMENT

ಚಾಕು ತೋರಿಸಿ ಸುಲಿಗೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 20:36 IST
Last Updated 3 ಡಿಸೆಂಬರ್ 2021, 20:36 IST

ಬೆಂಗಳೂರು: ವಸಂತನಗರದ ಅಂಗಡಿ ಯೊಂದಕ್ಕೆ ನುಗ್ಗಿ ಮಾಲೀಕರಿಗೆ ಚಾಕು ತೋರಿಸಿ ಸುಲಿಗೆ ಮಾಡಿದ್ದ ಆರೋಪ ದಡಿ ಸಿದ್ದಿಕ್ ಅಲಿಯಾಸ್ ಬರ್ನಲ್‌ನನ್ನು (27) ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವೈಟ್‌ಫೀಲ್ಡ್ ಚನ್ನಸಂದ್ರದ ಉಡುಪಿ ಗಾರ್ಡನ್‌ ನಿವಾಸಿ ಸಿದ್ದಿಕ್, ನ. 28ರಂದು ಅಂಗಡಿಗೆ ನುಗ್ಗಿಸುಲಿಗೆ ಮಾಡಿದ್ದ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಪ್ರಕರಣ ದಾಖ ಲಾಗಿತ್ತು. ಪುರಾವೆಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಚಾಕು ಹಾಗೂ ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಗರದ ವಿವಿಧ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿದ್ದ. ಆತನ ವಿರುದ್ಧ ಇದುವರೆಗೂ 15 ಪ್ರಕರಣಗಳು ದಾಖಲು ಆಗಿ ದ್ದವು. ಜೈಲಿಗೂ ಹೋಗಿದ್ದ ಆತ,ಜಾಮೀನು ಮೇಲೆ ಹೊರಗೆ ಬಂದಿದ್ದ. ಆತನ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಸಹ ಜಾರಿಯಾಗಿತ್ತು.’ ಎಂದೂ ತಿಳಿಸಿದರು.

ADVERTISEMENT

ಸುಳ್ಳು ಹೇಳಿದ್ದ: ‘ಆರೋಪಿ ವಾಸಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು. ಸ್ಥಳಕ್ಕೆ ಹೋದ ಪೊಲೀಸರ ತಂಡ, ಆತನನ್ನು ವಶಕ್ಕೆ ಪಡೆದಿತ್ತು. ಗಂಟಲು ಹಿಡಿದು ನರಳಾಗಿದ್ದ ಆರೋಪಿ, ಬ್ಲೇಡ್ ನುಂಗಿರುವುದಾಗಿ ಹೇಳಿದ್ದ. ಗಾಬರಿಗೊಂಡ ಪೊಲೀಸರು, ಆತನನ್ನು ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಿದ್ದರು. ಆದರೆ, ಯಾವುದೇ ಬ್ಲೇಡ್ ಇರಲಿಲ್ಲ. ಆರೋಪಿ ಸುಳ್ಳು ಹೇಳಿದ್ದ
ಎಂಬುದು ಗೊತ್ತಾಯಿತು’ ಎಂದೂ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.