ADVERTISEMENT

ಹಿಂದೂ ಧರ್ಮದ ಬಗ್ಗೆ ತಪ್ಪು ಭಾವನೆ ಮೂಡಿಸುವ ಪ್ರಯತ್ನ: ಗಿರೀಶ್‌ ಭಾರದ್ವಾಜ್‌

ಧರ್ಮಸ್ಥಳ ಮೇಲಿನ ಷಡ್ಯಂತ್ರ: ಸತ್ಯ ಮಿಥ್ಯಗಳ ಅನಾವರಣ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 19:50 IST
Last Updated 18 ಆಗಸ್ಟ್ 2025, 19:50 IST
<div class="paragraphs"><p>ಧರ್ಮಸ್ಥಳ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಅಗೆಯುವ ದೃಶ್ಯವು ಹೊರಗಿನವರಿಗೆ ಕಾಣಿಸಬಾರದೆಂದು ಹಸಿರು ಬಣ್ಣದ ಪರದೆಯನ್ನು ಕಟ್ಟಲಾಗಿತ್ತು</p></div>

ಧರ್ಮಸ್ಥಳ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಅಗೆಯುವ ದೃಶ್ಯವು ಹೊರಗಿನವರಿಗೆ ಕಾಣಿಸಬಾರದೆಂದು ಹಸಿರು ಬಣ್ಣದ ಪರದೆಯನ್ನು ಕಟ್ಟಲಾಗಿತ್ತು

   

–ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್

ಬೆಂಗಳೂರು: ಹಿಂದೂ ಧರ್ಮ ಹಾಗೂ ದೇಗುಲಗಳನ್ನು ಗುರಿಯಾಗಿಸಿ ಕರ್ನಾಟಕ ಮಾತ್ರವಲ್ಲದೇ ಭಾರತದ ಹಲವು ಕಡೆಗಳಲ್ಲಿ ತಪ್ಪು ಭಾವನೆ ಮೂಡಿಸುವ ಪ್ರಯತ್ನಗಳು ಪ್ರಬಲಗೊಂಡಿವೆ ಎಂದು ವಕೀಲ ಗಿರೀಶ್‌ ಭಾರದ್ವಾಜ್‌ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ನಗರದ ಪುರಭವನದಲ್ಲಿ ಸೋಮವಾರ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ‘ಧರ್ಮಸ್ಥಳ ಮೇಲಿನ ಷಡ್ಯಂತ್ರ: ಸತ್ಯ ಮಿಥ್ಯಗಳ ಅನಾವರಣ’ ಎನ್ನುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ದಶಕಗಳಿಂದಲೂ ಧರ್ಮದ ಹೆಸರಿನಲ್ಲಿ ಷಡ್ಯಂತ್ರಗಳು ನಡೆದುಕೊಂಡೇ ಬಂದಿವೆ. ಆದರೆ, ಒಂದು ದಶಕದ ಅವಧಿಯಲ್ಲಿ ಇದರ ಪ್ರಮಾಣ, ರೂಪು ರೇಷೆ ಬದಲಾಗಿದೆ. ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡುವ ಪ್ರಯತ್ನಗಳು ಪ್ರಬಲಗೊಂಡಿವೆ ಎಂದು ಆರೋಪಿಸಿದರು.

ಧರ್ಮಸ್ಥಳ ವಿಚಾರದಲ್ಲಿ ಸಂಯೋಜಿತ ಷಡ್ಯಂತ್ರಗಳು ನಡೆದಿವೆ. ಇದೆಲ್ಲವೂ ಬುರುಡೆ ಎನ್ನುವುದು ಬಯಲಾಗುತ್ತಿದೆ. ಸಂಘಟಿತರಾಗಿ ಇದಕ್ಕೆ ಉತ್ತರ ನೀಡಬೇಕಿದೆ ಎಂದು ಹೇಳಿದರು.

ಟಿಟಿಡಿ ಸದಸ್ಯರಾದ ಎಸ್‌.ನರೇಶ್‌ಕುಮಾರ್‌ ಮಾತನಾಡಿ, ‘ತಿರುಪತಿ ತಿರುಮಲದಲ್ಲಿ ಧರ್ಮದ ಗೊಂದಲವನ್ನು ಹುಟ್ಟು ಹಾಕಿ ಹಣ ಮಾಡುವ ಪ್ರಯತ್ನವನ್ನು ಹಿಂದಿನ ಸರ್ಕಾರ ನಡೆಸಿತು. ಹಿಂದೆಲ್ಲಾ ಧರ್ಮದ ಹೆಸರಿನಲ್ಲಿ ಆಸ್ತಿಪಾಸ್ತಿ ನಾಶ ಮಾಡುವುದು ನಡೆದಿತ್ತು. ಈಗ ಭಾವನೆಗಳ ಮೇಲೆ ದಾಳಿ ಮಾಡುವುದು ಹೆಚ್ಚಿದ್ದು, ಇದನ್ನು ಸಹಿಸಲಾಗದು’ ಎಂದು ಹೇಳಿದರು.

‘ಧರ್ಮವನ್ನು ದುರ್ಬಳಕೆ ಮಾಡಿಕೊಂಡು ರಿಯಲ್‌ ಎಸ್ಟೇಟ್‌ ನಡೆಸುವ ಹುನ್ನಾರಗಳು ನಡೆದಿವೆ. ಇದೇ ಕಾರಣದಿಂದಲೇ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅವರು ವಕ್ಫ್‌ ಮಂಡಳಿಯನ್ನೇ ರದ್ದುಪಡಿಸಿದ್ದಾರೆ. ಧರ್ಮಸ್ಥಳದ ವಿಚಾರದಲ್ಲೂ ಕೆಲ ಸಂಘಟನೆಗಳ ಪ್ರಮುಖರಿಂದ ಇದೇ ರೀತಿ ಆಗಿದೆ. ಇದಕ್ಕೆ ಎಂದಿಗೂ ಜಯ ಸಿಗುವುದಿಲ್ಲ’ ಎಂದು ತಿಳಿಸಿದರು.

ಸಮಿತಿ ಸಂಚಾಲಕ ವಿಕಾಸ್ ಪುತ್ತೂರು, ಪತ್ರಕರ್ತರಾದ ಜಿತೇಂದ್ರ ಕುಂದೇಶ್ವರ, ಕೀರ್ತಿ ಶಂಕರಘಟ್ಟ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.