ADVERTISEMENT

ಹಿಂದೂ ಹತ್ಯಾಕಾಂಡ ವಿಷಯ ಮಕ್ಕಳ ಮನಸ್ಸಲ್ಲಿ ದ್ವೇಷ ಮೂಡಿಸುತ್ತದೆ: ತಜ್ಞರ ಕಳವಳ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 4:56 IST
Last Updated 12 ಜುಲೈ 2022, 4:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಇತಿಹಾಸ ವಿಷಯದ ಪಠ್ಯದಲ್ಲಿಹಿಂದೂ ಹತ್ಯಾಕಾಂಡಗಳಂಥ ವಿಚಾರ ಮಕ್ಕಳ ಮನಸ್ಸಿನಲ್ಲಿ ಪರಸ್ಪರ ದ್ವೇಷ ಭಾವನೆ ಮೂಡಿಸಲಿದೆ. ಇಂತಹ ಪಠ್ಯ ಸಂವಿಧಾನದ ಆಶಯಗಳಿಗೆ ಮತ್ತು ಶೈಕ್ಷಣಿಕ ಚೌಕಟ್ಟಿಗೆ ವಿರುದ್ಧವಾಗಿದ್ದು ಶಾಂತಿ, ಸೌಹಾರ್ದತೆ, ಸಹಬಾಳ್ವೆಗೆ ಭಂಗ ತರಲಿದೆ’ ಎಂದು ಗುಲ್ಬರ್ಗಾ ಕೇಂದ್ರಿಯ ವಿಶ್ವವಿದ್ಯಾಲಯದ ವಿಶ್ರಾಂತ ಸಮ-ಕುಲಪತಿ ಪ್ರೊ.ಎಸ್. ಚಂದ್ರಶೇಖರ್, ತುಮಕೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ಒ. ಅನಂತರಾಮಯ್ಯ‌, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಅಶೋಕ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ಈ ಹೇಳಿಕೆಗೆ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಅಶ್ವತ್ಥನಾರಾಯಣ, ಕ್ರೈಸ್ಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಎಸ್.ಪಿ. ವಾಗೀಶ್ವರಿ, ‘ಇತಿಹಾಸ ದರ್ಪಣ’ದ ಸಂಪಾದಕ ಹಂ.ಗು.ರಾಜೇಶ್, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರ ಅಶ್ವತ್ಥನಾರಾಯಣ ಅವರೂ ಸಹಮತಿ ಸೂಚಿಸಿದ್ದಾರೆ.

‘ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‍ಇಪಿ) ಭಾಗವಾಗಿ ಇತಿಹಾಸ ವಿಷಯದ ತಜ್ಞರು ಸಲ್ಲಿಸಿರುವ ವರದಿಯ ಶಿಫಾರಸ್ಸಿನಲ್ಲಿ ಭಾರತದ ಇತಿಹಾಸದಲ್ಲಿ ನಡೆದ ಹಿಂದೂ ಹತ್ಯಾಕಾಂಡಗಳನ್ನು ಸೇರಿಸಬೇಕು ಎಂದು ಹೇಳಿರುವುದು ಆತಂಕ ಮತ್ತು ಆಶ್ಚರ್ಯ ಉಂಟು ಮಾಡಿದೆ. ಭಾರತದ ಇತಿಹಾಸದಲ್ಲಿ ಅನೇಕ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಹಿಂದೂ - ಬೌದ್ಧರು, ಹಿಂದೂ - ಜೈನರು, ಹಿಂದೂ - ಹಿಂದೂಗಳ ನಡುವೆ ಹತ್ಯಾಕಾಂಡಗಳು ನಡೆದಿವೆ. ಅವುಗಳನ್ನು ಮರೆಮಾಚಿ ಒಂದು ಧರ್ಮಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿಂದೂಗಳ ಹತ್ಯಾಕಾಂಡವಷ್ಟೆ ನಡೆದಿದೆ ಎಂದು ಬಿಂಬಿಸುವುದು ಚರಿತ್ರೆಗೆ ಮಾಡಿದ ಅಪಚಾರವಾಗುತ್ತದೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.