ADVERTISEMENT

ಹಾಪ್‌ಕಾಮ್ಸ್‌: ಗ್ರಾಹಕರಿಗೆ ಸಸಿ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 22:15 IST
Last Updated 7 ಆಗಸ್ಟ್ 2021, 22:15 IST
ಹಾಪ್‌ಕಾಮ್ಸ್‌ನಿಂದ ಸಸಿ ಸ್ವೀಕರಿಸಿದ ಗ್ರಾಹಕರು
ಹಾಪ್‌ಕಾಮ್ಸ್‌ನಿಂದ ಸಸಿ ಸ್ವೀಕರಿಸಿದ ಗ್ರಾಹಕರು   

ಬೆಂಗಳೂರು: ‘ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘದ (ಹಾಪ್‌ಕಾಮ್ಸ್‌) ಸಂಸ್ಥಾಪಕ ಎಂ.ಎಚ್.ಮರಿಗೌಡ ಅವರ ಜನ್ಮದಿನದ ಅಂಗವಾಗಿ ಸಂಸ್ಥೆಯ ಮಳಿಗೆಗಳಲ್ಲಿ ₹500ಕ್ಕಿಂತ ಮೇಲ್ಪ‍ಟ್ಟು ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಹೂವಿನ ಅಥವಾ ಅಲಂಕಾರಿಕ ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಎಸ್.ಮಿರ್ಜಿ ತಿಳಿಸಿದರು.

ಹಾಪ್‌ಕಾಮ್ಸ್‌ ಕೇಂದ್ರ ಕಚೇರಿಯಲ್ಲಿ ಗ್ರಾಹಕರಿಗೆ ಸಸಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ತೋಟಗಾರಿಕೆ ಇಲಾಖೆಯ ಪಿತಾಮಹ ಹಾಗೂಸಸ್ಯಪ್ರೇಮಿಯೂ ಆಗಿದ್ದ ಎಂ.ಎಚ್.ಮರಿಗೌಡ ಅವರನ್ನು ಸ್ಮರಿಸುವ ಉದ್ದೇಶದಿಂದ ಸಂಸ್ಥೆಯ ಆಯ್ದ 50ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗ್ರಾಹಕರಿಗೆ 2 ಸಾವಿರ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದರು.

ADVERTISEMENT

‘ಶನಿವಾರವೇ ಸಾಕಷ್ಟು ಮಂದಿ ಗ್ರಾಹಕರು ಉತ್ಪನ್ನ ಖರೀದಿಸಿ, ಸಸಿಗಳನ್ನು ಪಡೆದಿದ್ದಾರೆ. ಸೋಮವಾರದಿಂದ ಸಸಿಗಳ ವಿತರಣೆ ಮುಂದುವರಿಯಲಿದೆ. ಬರುವ ವರ್ಷ ಗ್ರಾಹಕರಿಗೆ ಹಣ್ಣಿನ ಸಸಿಗಳನ್ನು ವಿತರಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಹಾಪ್‌ಕಾಮ್ಸ್‌ ಅಧ್ಯಕ್ಷ ಎನ್.ದೇವರಾಜು,‘ರೈತರ ಬಗ್ಗೆ ಕಳಕಳಿ, ದೂರದೃಷ್ಟಿ ಹೊಂದಿದ್ದ ಮರಿಗೌಡ ಅವರು ಹಾಪ್‌ಕಾಮ್ಸ್‌ ಸಂಸ್ಥೆ ಹುಟ್ಟುಹಾಕಿದರು. ರೈತರಿಗೆ ಒಳ್ಳೆಯ ಸಸಿಗಳು ಸಿಗಬೇಕೆಂದು ರಾಜ್ಯದ ಹಲವು ಸ್ಥಳಗಳಲ್ಲಿ ನರ್ಸರಿಗಳನ್ನು ತೆರೆದಿದ್ದರು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.