ADVERTISEMENT

ಹಾಪ್‌ಕಾಮ್ಸ್‌: ಇಂದಿನಿಂದ ವಿಶೇಷ ರಿಯಾಯಿತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 17:46 IST
Last Updated 12 ಆಗಸ್ಟ್ 2021, 17:46 IST

ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘವು (ಹಾಪ್‌ಕಾಮ್ಸ್‌) ಸ್ವಾತಂತ್ರ್ಯ ದಿನ ಮತ್ತು ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಕೆಲ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಘೋಷಿಸಿದೆ.

‘ಪ್ರಸ್ತುತ ಮಾರುಕಟ್ಟೆಯಲ್ಲಿ ಹಣ್ಣು–ತರಕಾರಿಗಳ ದರ ಏರಿದೆ. ಆದರೆ, ಹಾಪ್‌ಕಾಮ್ಸ್‌ ಬೆಲೆ ಹೆಚ್ಚಿಸುವುದಿಲ್ಲ. ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿರುವುದರಿಂದ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ದರಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಸಂಸ್ಥೆ ನಿರ್ಧರಿಸಿದೆ’ ಎಂದು ಹಾಪ್‌ಕಾಮ್ಸ್‌ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಎಸ್.ಮಿರ್ಜಿ ತಿಳಿಸಿದರು.

‘ಆ.13ರಿಂದ 20ರವರೆಗೆ ಈ ರಿಯಾಯಿತಿ ಇರಲಿದೆ. ಕೋವಿಡ್ ಪರಿಸ್ಥಿತಿ ಇರುವುದರಿಂದ ಗ್ರಾಹಕರು ಜನಸಂದಣಿ ಸ್ಥಳಗಳಲ್ಲಿ ಖರೀದಿಸುವ ಬದಲಿಗೆ ಸಂಸ್ಥೆಯ ಮಳಿಗೆಗಳಲ್ಲೇ ಅಂತರ ಕಾಯ್ದುಕೊಂಡು ಉತ್ಪನ್ನಗಳನ್ನು ಖರೀದಿಸುವ ವ್ಯವಸ್ಥೆ ಕಲ್ಪಿಸಿದ್ದೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.